Wednesday, March 30, 2011

ಕೊಪ್ಪಳ ಬಂದ್ ಯಶಸ್ವಿ-ಚಿತ್ರಗಳುಕೊಪ್ಪಳ ಬಂದ್ ಯಶಸ್ವಿರೈತರ,ಕೂಲಿ ಕಾರ್ಮಿಕರ ಮತ್ತು ಮಹಿಳೆಯರ ಮೇಲೆ ಲಾಠಿ ಬೀಸಿದ, ಬಂಧಿಸಿದ್ದ ಪ್ರಕರಣಕ್ಕೆ ಪ್ರತಿಯಾಗಿ ಇಂದು ಕೊಪ್ಪಳ ಬಂದ್ ಕರೆ ನೀಡಲಾಗಿತ್ತು। ಕೊಪ್ಪಳದ ಸಮಸ್ತ ಜನತೆ ಬಂದ್ ಗೆ ಉತ್ತಮವಾಗಿ ಪ್ರತಿಕ್ರಿಯಿಸಿತು। ಪರೀಕ್ಷೆಗಳಿದ್ದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು। ಜನಸಂಚಾರ ಎಂದಿನಂತಿತ್ತು। ಆದರೆ ಎಲ್ಲ ಅಂಗಡಿಗಳು ವ್ಯಾಪಾರಿ ಸಂಸ್ಥೇಗಳು ಮುಚ್ಚಿದ್ದವು। ಮೆರವಣಿಗೆಯಲ್ಲಿ ಭಾಗವಹಿಸಿದ್ದ ರೈತರು, ಸಂಘಟನೆಗಳವರು,ಹೋರಾಟಗಾರರಿಗಿಂತ 5ಪಟ್ಟು ಹೆಚ್ಚು ಜನ ಪೋಲೀಸರು ಇದ್ದದ್ದು ಬಂದ್ ನ ಗಂಭೀರತೆಗೆ ಸಾಕ್ಷಿಯಾಗಿತ್ತು। ಇಲ್ಲಿವೆ ಕೆಲವು ಚಿತ್ರಗಳು

Monday, March 28, 2011

ಶ್ರೀ ಗವಿಮಠ ಸಾಕ್ಷ್ಯಚಿತ್ರಕ್ಕೆ ಗವಿಶ್ರಿಗಳಿಂದ ಚಾಲನೆಕೊಪ್ಪಳ ಮಾ. :. ನಗರದ ಆದ್ಯ ದೈವ ಶ್ರೀ ಗವಿಸಿದ್ಧೇಶ್ವರ ಮಠ ಮತ್ತು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಮತ್ತು ಧಾರ್ಮಿಕ ದರ್ಶನದ ಸಾಕ್ಷ್ಯಚಿತ್ರಕ್ಕೆ ಜಗದ್ಗುರು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವದರ ಮುಲಕ ಚಾಲನೆ ನೀಡಿದರು.
ಸಾಹಿತ್ಯ ಎಂಟರ್ ಪ್ರೈಸಸ್ ಶ್ರೀ ಸಹಸ್ರಾಂಜನೇಯ ಪಿಕ್ಚರ್‍ಸ್ ವತಿಯಿಂದ ನಡೆಯುತ್ತಿರುವ ಈ ಸಾಕ್ಷ್ಯ ಚಿತ್ರಗಳು ದೇಶದಲ್ಲಿಯೇ ಹೆಸರು ಮಾಡಲಿ, ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ಮಂಜುನಾಥ ಗೊಂಡಬಾಳ ಎತ್ತರಕ್ಕೆ ಬೆಳೆಯಲಿ ಇದಕ್ಕೆ ಎಲ್ಲರ ಸಹಕಾರವೂ ದೊರೆಯಲಿ ಎಂದ ಶ್ರೀಗಳು, ಕೊಪ್ಪಳವೇ ಒಂದು ಕ್ರಿಯಾಶೀಲತೆಯ ಕೇಂದ್ರ ಹಿಂದುಳಿದ ನಾಡಿನಲ್ಲಿ ಇಂಥಹ ಹೊಸ ಪ್ರಯತ್ನ ಸಫಲವಾಗಲೆಂದು ಶುಭ ಹಾರೈಸಿದರು. ಇಲ್ಲಿ ಬಹಳಷ್ಟು ಹೊಸತನವಿದೆ ಎಂದು ಶುಭ ಹಾರೈಸಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶ ಭೂಮರೆಡ್ಡಿ ಮತ್ತು ಗುತ್ತಿಗೆದಾರ ಎಸ್. ಆರ್. ನವಲಿ ಹಿರೇಮಠರವರು ಕ್ಯಾಮರಾಕ್ಕೆ ಆನ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನಿಡಿದರು. ವಿನೂತನ ಶಕ್ಷಣ ಸೇವಾ ಸಂಸ್ಥೆಯ ಕಾರ್ಯದರ್ಶಿ ಸಿದ್ದಲಿಂಗಯ್ಯ ಹಿರೇಮಠ ರವರು ಮಗುವಿಗಾಗಿ ಮಕ್ಕಳ ಕವನ ಸಂಕಲನವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಡಾ. ಎಂ. ಬಿ. ರಾಂಪೂರ, ಜಿ. ಪಂ. ಸದಸ್ಯ ನಾಗನಗೌಡ ಮಾಲಿಪಾಟೀಲ್, ಜಿ. ಪಂ. ಸದಸ್ಯೆ ನೇತ್ರಾವತಿ ಮಲ್ಲಪ್ಪ, ವೆಂಕನಗೌಡ ಪಾಟೀಲ್ ಹೊರತಟ್ನಾಳ, ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ, ಭರಮಣ್ಣ ಲಳಗಿ, ಮಲ್ಲಪ್ಪ ಗುಮಗೇರಿ, ವಿಜಯ ಅಮೃತರಾಜ್, ಶಿವಾನಂದ ಹೊದ್ಲೂರ,ಚಿತ್ರದ ನಿರ್ಮಾಪಕ ಮಂಜುನಾಥ ಜಿ. ಗೊಂಡಬಾಳ, ಸಹ ನಿರ್ಮಾಪಕ ಕೆ. ಎಂ. ಸೈಯ್ಯದ್, ಜಯ ಕರ್ನಾಟಕ ಸಂಘದ ವಿಜಯಕುಮಾರ ಕವಲೂರ ಇನ್ನಿತರರು ಉಪಸ್ಥಿತರಿದ್ದರು. ಐದು ದಿನಗಳ ಕಾಲ ಕೊಪ್ಪಳ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ರಾಜ್ಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಮಲ್ಲಿಕಾರ್ಜುನ ಬೆಂಗಳೂರ ರವರು ಶ್ರೀ ಗವಿಮಠ ಮತ್ತು ನಗರದ ವಿವಿಧ ಸ್ಥಳಗಳನ್ನು ಚಿತ್ರೀಕರಿಸಿದರು. ನಂತರ ಟಿ. ವಿ. ಯಲ್ಲಿ ಹಾಗೂ ಡಿವಿಡಿ ರೂಪದಲ್ಲಿ ಸದರಿ ಸಾಕ್ಷ್ಯಚಿತ್ರ ಹೊರಬರಲಿದೆ ಎಂದು ತಿಳಿಸಿದರು. ಸೋಮುವಾರ ಆನೆಗೊಂದಿ, ಕನಕಗಿರಿ, ಗವಿಮಠದ ಕಾರ್ಯಕ್ರಮ, ಕುಮ್ಮಟದುರ್ಗದ ಕುಮಾರರಾಮ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ.

z

ಕೊಪ್ಪಳ ರೈತರ ಮೇಲೆ ಲಾಠಿ ಚಾರ್ಜ - ವಿಡಿಯೋ


http://www.youtube.com/watch?v=ME7tlg-CJIs

Saturday, March 26, 2011

ಲಾಠಿ ಬೀಸಿದ ಪ್ರಕರಣ : ಇಬ್ಬರ ಅಮಾನತು

ಕೊಪ್ಪಳ : ಕೂಲಿ ಹಣ ಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಬೀಸಿದ ಘಟನೆಗೆ ಸಂಬಂಧಿಸಿದಂತೆ ಎ ಎಸೈ ರಾಮಣ್ಣ ನಾಯಕ್ ಮತ್ತು ಪೋಲೀಸ್ ಕಾನ್ಸ್ ಟೇಬಲ್ ತಾರಾಸಿಂಗ್ ರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ। ಘಟನೆಯ ಬಗ್ಗೆ ವರದಿ ಬರುವವರೆಗೆ ಈ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Friday, March 25, 2011

ಕೇಳಿದ್ದು ಕೂಲಿ, ಸಿಕ್ಕಿದ್ದು ಲಾಠಿ ಏಟು !

ಕೊಪ್ಪಳ : ತಾಲೂಕ ಪಂಚಾಯತ್ ಆವರಣದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಕೂಲಿಕಾರರು ತಾಲೂಕ ಪಂಚಾಯತಿಗೆ ಬೀಗ ಹಾಕಲು ಹೋದಾಗ ಅದನ್ನು ತಡೆದ ಪೋಲಿಸರ ಮತ್ತು ಪ್ರತಿಭಟನಾಕಾರರ ಮಧ್ಯೆ ಘರ್ಷಣೆ ಸಂಭವಿಸಿದೆ। ಪೋಲಿಸರು ಪ್ರತಿಭಟನಾ ನಿರತರನ್ನು ಅಟ್ಟಾಡಿಸಿ ಹೊಡೆದ ಘಟನೆ ಜರುಗಿದೆ। ರೈತರನ್ನು ಹಿಗ್ಗಾಮುಗ್ಗಾ ಥಳಿಸಿದ ಪೋಲಿಸರು 10ಕ್ಕೂ ಹೆಚ್ಚು ಜನ ರೈತರನ್ನು, ಕಾರ್ಮಿಕರನ್ನು ಬಂಧಿಸಿದ್ದಾರೆ।
ರೈತರ ಮೇಲೆ ಪೋಲಿಸರು ಹಲ್ಲೆ ಮಾಡಿದ್ದನ್ನು ರೈತ ಮುಖಂಡರು, ಕಾರ್ಮಿಕ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ

ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ೮ನೇ ಪುಣ್ಯಸ್ಮರಣೋತ್ಸವ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳದಲ್ಲಿ ದಿನಾಂಕ ೨೮.೦೩.೨೦೧೧ ಸೋಮವಾರದಂದು ಲಿಂಗೈಕ್ಯ ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ೮ನೇಯ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವು ಜರುಗಲಿದೆ. ಅಂದು ಬೆಳಿಗ್ಗೆ ೭.೩೦ಕ್ಕೆ ಪರಮಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಗರದ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ ಕಾರ್ಯಕ್ರಮ ಜರುಗುವದು. ಅಂದೆ ಬೆಳಿಗ್ಗೆ ೧೦.೩೦ಕ್ಕೆ ಬಸವೇಶ್ವರ ವೃತ್ತದಲ್ಲಿನ ನೂತನ ಮಹಾದ್ವಾರ ಕಟ್ಟಡದ ಉದ್ಘಾಟನೆ ಹಾಗೂ ಕಳಸಾರೋಹಣವನ್ನು ಷ. ಬ್ರ. ಶ್ರೀ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಧರ ಮುರುಡಿ, ಹಿರೇಮಠ, ಯಲಬುರ್ಗಾ ಪೂಜ್ಯರ ಲಿಂಗ ಹಸ್ತದಿಂದ ಜರುಗುವದು. ಬೆಳಿಗ್ಗೆ ೧೧.೦೦ ಗಂಟೆಗೆ ೧೦೮ ಅಡಿ ಎತ್ತರದ ರಾಜಗೋಪುರ ಕಟ್ಟಡದ ಶಿಲಾನ್ಯಾಸವನ್ನು ಶ್ರೀ ಮ. ನಿ. ಪ್ರ. ಡಾ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ವಿರಕ್ತಮಠ, ಕನಕಗಿರಿ ಪೂಜ್ಯರು ಶ್ರೀಮಠದ ಆವರಣದಲ್ಲಿ ನೆರವೇರಿಸುವರು. ಅಂದು ಸಾಯಂಕಾಲ ೬.೩೦ ಗಂಟೆಗೆ ಕೈಲಾಸಮಂಟಪದಲ್ಲಿ ಜರುಗಲಿರುವ ಗುರುಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಹಿರೇನಾಗಾವಿಯ ಶ್ರೀ ಮ. ನಿ. ಪ್ರ. ಜಯಶಾಂತಲಿಂಗ ಮಹಾಸ್ವಾಮಿಗಳು, ಹೆಬ್ಬಾಳದ ಷ. ಬ್ರ. ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ, ಹೆಬ್ಬಾಳ, ಢವಳಗಿಯ ಪರಮಪೂಜ್ಯ ಶ್ರೀ ಘನಮಠೇಶ್ವರ ಮಹಾಸ್ವಾಮಿಗಳು ಅಲ್ಲದೇ, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಪ್ರಧಾನ ಸಂಚಾಲಕರಾದ ಡಾ. ಬಸವರಾಜ ಪಾಟೀಲ ಸೇಡಂ ಆಗಮಿಸಲಿದ್ದಾರೆ. ಶ್ರೀ ಷ. ಬ್ರ. ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ರಚಿಸಿದ ಶಿವಶಾಂತ ಎಂಬ ಕವನಸಂಕಲನವು ಲೋಕಾರ್ಪಣೆಯಾಗಲಿದೆ. ಇದೇ ವೇದಿಕೆಯಲ್ಲಿ ಪಂ. ಪ್ರಕಾಶ ಸೊಂಟಕ್ಕಿ ಹಾಗೂ ಶ್ರೀಮತಿ ಸುಮಾ ಸುಧೀಂದ್ರ ಬೆಂಗಳೂರು ತಂಡದವರಿಂದ ಫ್ಯೂಜನ್ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಆಗಮಿಸಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.
ಉಚಿತ ಆರೋಗ್ಯ ತಪಾಸಣೆ
ಈ ಗುರುಸ್ಮರಣೆ ಕಾರ್ಯಕ್ರಮದ ಅಂಗವಾಗಿ ಪೂಜ್ಯ ಶ್ರೀಗಳ ಸಂಕಲ್ಪದಂತೆ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬೆಳಿಗ್ಗೆ ೯.೩೦ ರಿಂದ ಸಂಜೆ ೫.೦೦ ಗಂಟೆಯವರೆಗೆ ಪ್ರಖ್ಯಾತ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು

Tuesday, March 22, 2011

ಆನೆಗೊಂದಿ ಉತ್ಸವದ ಬ್ಲಾಗ್

http://anegundiutsav.blogspot.com/

ಆನೆಗೊಂದಿಯ ಉತ್ಸವ. ೨೩ ರ ಸಾಂಸ್ಕೃತಿಕ ಕಾರ್ಯಕ್ರಮಗಳು
ಕೊಪ್ಪಳ ಮಾ. : ಸುವರ್ಣಯುಗವೆಂದೇ ಬಣ್ಣಿಸಲಾಗಿರುವ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿಯ ಭವ್ಯ ಇತಿಹಾಸವನ್ನು ಮೆಲುಕು ಹಾಕುವ ರೀತಿಯಲ್ಲಿ ಈ ಬಾರಿ ಅದ್ಧೂರಿ ಆನೆಗೊಂದಿ ಉತ್ಸವವನ್ನು ಮಾ. ೨೩ ಮತ್ತು ೨೪ ರಂದು ಎರಡು ದಿನಗಳ ಕಾಲ ಆನೆಗೊಂದಿಯಲ್ಲಿ ಏರ್ಪಡಿಸಲಾಗಿದೆ.
ಮಾ. ೨೩ ರಂದು ಸಂಜೆ ೪ ಗಂಟೆಗೆ ಆನೆಗೊಂದಿ ಉತ್ಸವದ ಮುಖ್ಯ ವೇದಿಕೆಯಾಗಿರುವ ’ಶ್ರೀ ಪ್ರೌಢದೇವರಾಯ ವೇದಿಕೆ’ಯಲ್ಲಿ ಉತ್ಸವದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೆರವೇರಿಸಲಿದ್ದಾರೆ. ಮಾ. ೨೩ ರಂದು ಮುಖ್ಯ ವೇದಿಕೆ ’ಶ್ರೀ ಪ್ರೌಢದೇವರಾಯ ವೇದಿಕೆ’ ಹಾಗೂ ಆನೆಗೊಂದಿ ಗ್ರಾಮದಲ್ಲಿನ ’ಕುಪ್ಪಮ್ಮ ರಾಣಿ ವೇದಿಕೆ’ಯಲ್ಲಿ ಜರುಗುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.
’ಶ್ರೀ ಪ್ರೌಢದೇವರಾಯ ವೇದಿಕೆ ಯಲ್ಲಿನ ಕಾರ್ಯಕ್ರಮಗಳು:
ಸಂಜೆ ೪ ಗಂಟೆಗೆ ಉತ್ಸವದ ಉದ್ಘಾಟನೆ ಇದಕ್ಕೂ ಮುನ್ನ ಬೆಂಗಳೂರಿನ ಕಿಕ್ಕೇರಿ ಕೃಷ್ಣಮೂರ್ತಿ ಅವರಿಂದ ನಾಡಗೀತೆ. ಸಂಜೆ ೫ ಗಂಟೆಗೆ ಮಾರುತಿ ಭಜಂತ್ರಿ ಅವರಿಂದ ಷಹನಾಯ್ ವಾದನ, ೫-೧೦ ಕೆ ಆನೆಗೊಂದಿಯ ಚಂಪಕಮಾಲಾ ರಿಂದ ವಚನಗಾಯನ, ೫-೨೦ಕ್ಕೆ ಧಾರವಾಡದ ಶಫೀಕಖಾನ್, ಮುಂಬೈನ ಸಮೀರ್ ಎಲ್ ರಾವ್, ಕಲ್ಕತ್ತಾದ ಸಂದೀಪ್ ಯಾನ್ ಚಟರ್ಜಿ ಅವರಿಂದ ಹಿಂದುಸ್ತಾನಿ ವಾದ್ಯತ್ರಯ ಕಾರ್ಯಕ್ರಮ, ೬ಕ್ಕೆ ರಾಜಸ್ತಾನ ನೃತ್ಯ ಕಲಬೇಲಿಯಾ, ೬-೧೫ಕ್ಕೆ ಮರ‍್ಲಾನಹಳ್ಳಿಯ ಎಸ್. ರಾಮಾಂಜನೇಯಲು ರಿಂದ ಕ್ಲಾರಿಯೋನಟ್ ವಾದನ, ೬-೩೦ಕ್ಕೆ ಗಂಗಾವತಿಯ ಸುರಯ್ಯ ಬೇಗಂ ಮುದ್ದಾಬಳ್ಳಿ ರಿಂದ ಸುಗಮ ಸಂಗೀತ, ೬-೪೦ಕ್ಕೆ ಹರಿಯಾಣ ರಾಜ್ಯ ತಂಡದಿಂದ ಹೋಲಿ ನೃತ್ಯ, ೬-೫೦ಕ್ಕೆ ಹುಸೇನಸಾಬ ಗುಂಡೂರ ರಿಂದ ರಂಗಗೀತೆ, ೭ ಕ್ಕೆ ಬೆಂಗಳೂರಿನ ಆಸ್ಪೆಕ್ಟ್ ಕನ್ಸ್‌ಲ್ಟನ್ಸಿ ಮತ್ತು ನವೀನ್‌ಕೃಷ್ಣ ತಂಡದಿಂದ ಶ್ರೀಕೃಷ್ಣದೇವರಾಯ ರೂಪಕ, ೭-೪೫ಕ್ಕೆ ಬೆಂಗಳೂರಿನ ಬಿ.ಕೆ. ಸುಮಿತ್ರಾ ತಂಡದಿಂದ ಸುಗಮ ಸಂಗೀತ, ೮-೧೫ಕ್ಕೆ ಬೆಂಗಳೂರಿನ ವಿಕ್ರಂ ಸೂರಿ ತಂಡದಿಂದ ನೃತ್ಯರೂಪಕ, ೮-೪೫ಕ್ಕೆ ಪಟ್ಟಲಚಿಂತಿಯ ಯಮನೂರಪ್ಪ ಭಜಂತ್ರಿ ರಿಂದ ತತ್ವಪದ, ೯ ಕ್ಕೆ ರಾಯಚೂರಿನ ರೂಪಾ ನಂಜರಗಿ ತಂಡದಿಂದ ಭರತ ನಾಟ್ಯ, ೯-೩೦ ಕ್ಕೆ ಬೆಂಗಳೂರಿನ ಚಲನಚಿತ್ರ ಹಿನ್ನೆಲೆ ಗಾಯಕರಾದ ಅಜಯ್ ವಾರಿಯರ್ ಸಂಗಡಿಗರಿಂದ ಚಲನಚಿತ್ರ ಸಂಗೀತ, ೧೦-೩೦ಕ್ಕೆ ಬೆಂಗಳೂರಿನ ನಾಟ್ಯಾಂಜನ ಸ್ಕೂಲ್ ಆಫ್ ಡ್ಯಾನ್ಸ್ ಅಂಡ್ ಮ್ಯೂಜಿಕ್ ತಂಡದಿಂದ ನೃತ್ಯ ರೂಪಕ, ೧೧ ಕ್ಕೆ ರಾಜಮಹ್ಮದ್ ಬಿ. ಕೆಸರಟ್ಟಿ ರಿಂದ ದಾಸವಾಣಿ, ೧೧-೧೫ಕ್ಕೆ ಹುಬ್ಬಳ್ಳಿಯ ಪಂ. ನಾಗನಾಥ್ ಒಡೆಯರ್ ರಿಂದ ಹಿಂದುಸ್ತಾನಿ ಗಾಯನ, ೧೧-೪೫ಕ್ಕೆ ಬೆಂಗಳೂರಿನ ಶೋಭಾ ಮಹೇಶ್ ತಂಡದಿಂದ ಜಾನಪದ ಸಂಗೀತ, ಹಾಗೂ ರಾತ್ರಿ ೧೨ ಗಂಟೆಗೆ ಕೊಪ್ಪಳದ ತಾಲೂಕಾ ರಂಗ ಕಲಾವಿದರ ಸಂಘದಿಂದ ’ಎಚ್ಚಮನಾಯಕ’ ನಾಟಕ. ಕಾರ್ಯಕ್ರಮಗಳು ಜರುಗಲಿವೆ.


ಕುಪ್ಪಮ್ಮ ರಾಣಿ ವೇದಿಕೆಯ ಕಾರ್ಯಕ್ರಮಗಳು :


ಮಾ. ೨೩ ರಂದು ಸಂಜೆ ೫ ಗಂಟೆಗೆ ಬಿಜಾಪುರದ ಗಿರಿಮಲ್ಲಪ್ಪ ಭಜಂತ್ರಿ ರಿಂದ ಷಹನಾಯ್ ವಾದನ, ೫-೧೦ಕ್ಕೆ ಯಲಬುರ್ಗಾದ ಶರಣಕುಮಾರ ಬಂಡಿ ರಿಂದ ವಚನಗಾಯನ, ೫-೨೦ಕ್ಕೆ ಕಲ್ಲೂರಿನ ಮಹಾಂತೇಶ ಶಾಸ್ತ್ರಿ ಹಿರೇಮಠ ರಿಂದ ತತ್ವಪದ, ೫-೩೦ಕ್ಕೆ ಬಿನ್ನಾಳದ ಜೀವನಸಾಬ ವಾಲಿಕಾರ ರಿಂದ ಗೀಗೀ ಪದ, ೫-೪೦ಕ್ಕೆ ಭಾಗ್ಯನಗರದ ಅಂಬಿಕಾ ಉಪ್ಪಾರ ರಿಂದ ರಂಗಗೀತೆ, ೬ ಗಂಟೆಗೆ ಕೊಪ್ಪಳ ಜಿಲ್ಲೆ ನಾಗರಿಕ ವೇದಿಕೆ ತಂಡದಿಂದ ಮಯೂರ ದೀಪ ನೃತ್ಯ,, ೬-೨೦ಕ್ಕೆ ಉತ್ತರಪ್ರದೇಶ ರಾಜ್ಯ ತಂಡದಿಂದ ಮಯೂರ ನೃತ್ಯ, ೬-೪೦ಕ್ಕೆ ಬಳ್ಳಾರಿಯ ಅನೂಷಾ ಜಿ. ಕಾಡ್ಲೂರ ರಿಂದ ಸುಗಮ ಸಂಗೀತ, ೭-೧೦ಕ್ಕೆ ವಿದ್ವಾನ್ ಮೈಸೂರ ಮಂಜುನಾಥ್ ಮತ್ತು ನಾಗರಾಜ್ ರಿಂದ ಫ್ಯೂಜನ್ ಸಂಗೀತ, ೭-೪೦ಕ್ಕೆ ಪಂಜಾಬ್ ರಾಜ್ಯ ತಂಡದಿಂದ ಭಾಂಗಡಾ ನೃತ್ಯ, ೮ಕ್ಕೆ ಗಂಗಾವತಿಯ ಪಂಚಾಕ್ಷರಿ ಸ್ವಾಮಿ ಕುರುಬಗೊಂಡ ರಿಂದ ಸುಗಮ ಸಂಗೀತ, ೮-೧೦ಕ್ಕೆ ಬೆಂಗಳೂರಿನ ವೇಮಗಲ್ ನಾರಾಯಣಸ್ವಾಮಿ ರಿಂದ ಜಾನಪದ ಗಾಯನ, ೮-೪೦ಕ್ಕೆ ಚಿತ್ರದುರ್ಗದ ಅಂಜನಾ ನೃತ್ಯ ಶಾಲೆಯಿಂದ ನೃತ್ಯ ರೂಪಕ, ೯-೧೦ಕ್ಕೆ ಗಂಗಾವತಿಯ ಶೃಂಗೇರಿ ಶಾರದಾಂಬಾ ಭಜನಾ ಮಂಡಳಿಯಿಂದ ಜಾನಪದ ಭಜನೆ, ೯-೨೫ಕ್ಕೆ ಮೋರನಾಳದ ಕೇಶಪ್ಪ ಬಾಳಪ್ಪ ಶಿಳ್ಳಿಕ್ಯಾತರ ತಂಡದಿಂದ ತೊಗಲುಗೊಂಬೆಯಾಟ, ೯-೫೦ಕ್ಕೆ ಧಾರವಾಡದ ಡಿ. ಕುಮಾರದಾಸ ರಿಂದ ಹಿಂದುಸ್ತಾನಿ ಗಾಯನ, ೧೦-೨೦ಕ್ಕೆ ಗೊರಟಾ ಬೀದರ್‌ನ ಸಿದ್ರಾಮಯ್ಯ ಮಠಪತಿ ರಿಂದ ಭಾವಗೀತೆಗಳು, ೧೦-೪೦ಕ್ಕೆ ಕಾರಟಗಿಯ ಭೂಮಿಕಾ ಮತ್ತು ವಿನುತಾರಿಂದ ಭರತನಾಟ್ಯ, ೧೧ಕ್ಕೆ ಮರ‍್ಲಾನಹಳ್ಳಿಯ ಶಿವಲೀಲಾ ಹಾದಿಮನಿರಿಂದ ಸುಗಮ ಸಂಗೀತ, ೧೧-೧೦ಕ್ಕೆ ದಾವಣಗೆರೆಯ ಗುರು ವಾದ್ಯವೃಂದದಿಂದ ಸಂಗೀತ ಲಹರಿ, ೧೧-೩೦ಕ್ಕೆ ಬೆಂಗಳೂರಿನ ರೇಖಾ ಹರಿನಾಥ್ ರಿಂದ ಕರ್ನಾಟಕ ಸಂಗೀತ ಹಾಗೂ ರಾತ್ರಿ ೧೨ಕ್ಕೆ ಗಂಗಾವಗತಿಯ ನೀಲಕಂಠೇಶ್ವರ ನಾಟ್ಯ ಸಂಘದಿಂದ ’ಗಿರಿಜಾ ಕಲ್ಯಾಣ’ ಬಯಲಾಟ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಆನೆಗೊಂದಿಯಲ್ಲಿ ಮಾ. ೨೩ ರಂದು ಎರಡೂ ವೇದಿಕೆಗಳಲ್ಲಿ ಸಂಗೀತ, ರಂಗಕಲೆ, ಜಾನಪದ, ಸಾಂಸ್ಕೃತಿಕ ಮುಂತಾದ ಕ್ಷೇತ್ರಗಳ ಪ್ರಸಿದ್ಧ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು, ಕಲಾ ಪ್ರೇಮಿಗಳು, ಸಂಗೀತಾಸಕ್ತರು ಕಾರ್ಯಕ್ರಮಗಳ ರಸದೌತಣವನ್ನು ಸವಿದು, ಸಂಭ್ರಮಿಸಬಹುದಾಗಿದೆ.

Monday, March 21, 2011

ವಿಚಾರ ಸಂಕಿರಣ, ಕವಿ ಕಾವ್ಯ ಕುಂಚ ಕಾರ್ಯಕ್ರಮಗಳು

ಕೊಪ್ಪಳ ಮಾ. : ಆನೆಗೊಂದಿ ಉತ್ಸವದ ಅಂಗವಾಗಿ ವಿಚಾರವಾದಿಗಳ, ಸಂಶೋಧಕರನ್ನು ಚಿಂತನ-ಮಂಥನಕ್ಕೆ ಹಚ್ಚಿಸುವಂತೆ ವಿಚಾರ ಸಂಕಿರಣ, ಕವಿತೆಯಲ್ಲಿ ಕಲ್ಪನೆಯನ್ನು ಸೃಷ್ಠಿಸುವಂತಹ ಕವಿ ಕಾವ್ಯ ಜೊತೆಗೆ ಅದಕ್ಕೆ ರೂಪ ನೀಡುವ ಕುಂಚ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ.
ಮಾ. ೨೪ ರಂದು ಬೆಳಿಗ್ಗೆ ೧೧ ಗಂಟೆಗೆ ಆನೆಗೊಂದಿ ಗ್ರಾಮದಲ್ಲಿ ನಿರ್ಮಿಸಿರುವ ಕುಪ್ಪಮ್ಮ ರಾಣಿ ವೇದಿಕೆಯಲ್ಲಿ ಆನೆಗೊಂದಿ ಇತಿಹಾಸ ಮತ್ತು ಸಂಸ್ಕೃತಿ ಕುರಿತಂತೆ ವಿಶೇಷ ವಿಚಾರಸಂಕಿರಣ ಏರ್ಪಡಿಸಲಾಗಿದ್ದು, ಪ್ರೊ. ಲಕ್ಷ್ಮಣ ತೆಲಗಾವಿ ಅವರು ವಿಚಾರಸಂಕಿರಣದ ಅಧ್ಯಕ್ಷತೆ ವಹಿಸುವರು. ಕೊಪ್ಪಳದ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ಅವರಿಂದ ಆಶಯದ ನುಡಿ, ನಂತರ ಗಂಗಾವತಿಯ ಕೆ.ಎಸ್.ಸಿ. ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಅವರು ಆನೆಗೊಂದಿ, ರಾಜಕೀಯ ಪರಂಪರೆ ಕುರಿತು ತಮ್ಮ ಪ್ರಬಂಧ ಮಂಡನೆ ಮಾಡುವರು. ಜೊತೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ. ಕೊಟ್ರೇಶ್ ಅವರು ಆನೆಗೊಂದಿ, ಸಾಂಸ್ಕೃತಿ ಪರಂಪರೆ ಕುರಿತು ತಮ್ಮ ಪ್ರಬಂಧ ಮಂಡಿಸುವರು. ಕಾರ್ಯಕ್ರಮದಲ್ಲಿ ಗಂಗಾವತಿಯ ಹೆಚ್.ಆರ್.ಎಸ್.ಎಂ. ಕಾಲೇಜಿನ ಉಪನ್ಯಾಸಕ ಪ್ರೊ. ಎಫ್.ಎಚ್. ಚಿತ್ರಗಾರ, ಸರ್ಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕ ಡಾ. ನಾರಾಯಣ ಕಂದಗಲ್, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕ ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್, ಕುಕನೂರಿನ ಹೊಸಮನಿ ಪದವಿ ಕಾಲೇಜು ಪ್ರಾಚಾರ್ಯ ಪ್ರೊ. ಪವನಕುಮಾರ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಾ. ೨೪ ರಂದು ಮಧ್ಯಾಹ್ನ ೧೨-೩೦ ಗಂಟೆಗೆ ಯುವ ಕವಿ ಕಾವ್ಯ ಕುಂಚ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಬಾಗಲಕೋಟೆಯ ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಈ ಕಾರ್ಯಕ್ರಮದಲ್ಲಿ ಕವಿಗಳಾದ ಸಲೀಮಾ ಎಂ. ಮಂಗಳೂರು, ರಮೇಶ್ ಗಬ್ಬೂರ, ಜಿ.ಎಸ್. ಗೋನಾಳ, ಸಿರಾಜ್ ಬಿಸರಳ್ಳಿ, ಈಶಪ್ಪ ಮಳಗಿ, ಎನ್. ಜಡಿಯಪ್ಪ, ನಟರಾಜ ಸೋನಾರ, ಸೋಮು ಕುದರಿಹಾಳ, ಸತೀಶ ಎಚ್.ಆರ್., ಮಮ್ತಾಜ್ ಬೇಗಂ, ರುದ್ರಮ್ಮ ಆಶಿನಾಳ, ಆಂಜನೇಯ ಟಿ., ರವೀಂದ್ರ ಬಾಕಳೆ ಅವರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಗಾಯಕರುಗಳಾದ ದೊಡ್ಡಯ್ಯ ವಿ. ಕಲ್ಲೂರ, ಕೆ.ಎಫ್. ಮುದ್ದಾಬಳ್ಳಿ, ಹಣಮಂತರಾವ್ ಕುಲಕರ್ಣಿ, ವೆಂಕಟೇಶ ದಾಸನಾಳ, ಜುಜ್ಜವರಪು ನಾಗೇಶ್ವರರಾವ್, ಹಂದ್ರಾಳ ವಿಶ್ವನಾಥ, ಶಿವಪ್ಪ ಹುಳ್ಳ, ಸುರಯ್ಯ ಬೇಗಮ್ ಮುದ್ದಾಬಳ್ಳಿ, ಎಸ್.ಎಸ್.ಎಂ. ರುದ್ರಾಣಿ ಕಂಪ್ಲಿ, ವಿದ್ಯಾಶ್ರೀ ಸಾಲಮಠ, ಗೀತಾ ಕಾಶೆಟ್ಟಿ, ಮತ್ತು ಛತ್ರಪ್ಪ ತಂಬೂರಿ ಅವರು ಭಾಗವಹಿಸುವರು. ಕವಿಗಳ ಕಾವ್ಯಕ್ಕೆ ಗಾಯಕರು ಜೀವ ನೀಡಿದರೆ, ಅದಕ್ಕೆ ರೂಪ ನೀಡಲು ಕುಂಚ ಕಲಾವಿದರುಗಳಾದ ಚಂದ್ರಶೇಖರ ಕಲ್ಮನಿ, ಜಿ.ಕೆ. ಬಡಿಗೇರ, ಅಣ್ಣಪ್ಪ ಚಿತ್ರಗಾರ, ವೀರಾಚಾರಿ ಕಮ್ಮಾರ, ಮಲ್ಲಿಕಾರ್ಜುನ ಸುರತಾನಿ, ಪ್ರಶಾಂತ, ಯಶೋಧಾ ಪತ್ತಾರ, ಸಾಗರ ಚಿತ್ರಗಾರ ಹಾಗೂ ಹನಿರಾಜ ಅವರು ಭಾಗವಹಿಸುವರು. ಈ ಕಾರ್ಯಕ್ರಮಕ್ಕೆ ಕಸಾಪ ಗಂಗಾವತಿ ತಾಲೂಕು ಅಧ್ಯಕ್ಷ ಬಸವರಾಜ ಕೋಟೆ ಅವರ ಸಂಯೋಜನೆಯಿದ್ದು, ಕೊಪ್ಪಳ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಕೆ.ಎಫ್. ಮುದ್ದಾಬಳ್ಳಿ ಅವರ ಸಂಗೀತ ಸಂಯೋಜನೆಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ

Sunday, March 20, 2011

ಆನೆಗೊಂದಿ ಉತ್ಸವ:ಎರಡು ವೇದಿಕೆಗಳಲ್ಲೂ ಆಕರ್ಷಕ ಕಾರ್ಯಕ್ರಮಗಳು

ಕೊಪ್ಪಳ ಮಾ.೧೯ : ಇದೇ ಮಾ. ೨೩ ಹಾಗೂ ೨೪ ರಂದು ಎರಡು ದಿನಗಳ ಕಾಲ ಆನೆಗೊಂದಿಯಲ್ಲಿ ಅದ್ಧೂರಿ ಆನೆಗೊಂದಿ ಉತ್ಸವ ಏರ್ಪಡಿಸಲಾಗಿದ್ದು, ಈ ಬಾರಿ ಎರಡು ವೇದಿಕೆಗಳಲ್ಲಿ ಉತ್ಸವದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ರಸದೌತಣ ಸವಿಯಬಹುದಾಗಿದೆ. ವೇದಿಕೆಗಳಲ್ಲಿ ನಡೆಯುವ ವೈವಿಧ್ಯಮಯ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಖ್ಯಾತನಾಮ ಕಲಾವಿದರು, ಖ್ಯಾತ ಚಲನಚಿತ್ರ ನಟ ಶಿವರಾಜ್‌ಕುಮಾರ್, ಚಲನಚಿತ್ರ ಹಿನ್ನೆಲೆ ಗಾಯಕರುಗಳಾದ ರಾಜೇಶ್ ಕೃಷ್ಣನ್, ಹೇಮಂತ್, ಚೈತ್ರ, ಚೇತನ್, ಸೇರಿದಂತೆ ಹಲವು ನಟ, ನಟಿಯರು, ಗಂಗಾವತಿಯ ಬಿ. ಪ್ರಾಣೇಶ್ ಅವರು ಪಾಲ್ಗೊಳ್ಳಲಿದ್ದಾರೆ.
ಆನೆಗೊಂದಿ ಉತ್ಸವ ಅಂಗವಾಗಿ ಆನೆಗೊಂದಿಯ ಹೊರವಲಯ ಬಳಿ ನಿರ್ಮಿಸಲಾಗಿರುವ ಶಾಶ್ವತ ವೇದಿಕೆಯಲ್ಲಿ ಮುಖ್ಯವೇದಿಕೆಯಾಗಿ ಶ್ರೀ ಪ್ರೌಢದೇವರಾಯ ವೇದಿಕೆ ಹಾಗೂ ಆನೆಗೊಂದಿಯ ಗ್ರಾಮದ ಒಳಗೆ ನಿರ್ಮಿಸಿರುವ ಎರಡನೆ ವೇದಿಕೆ ಕುಪ್ಪಮ್ಮ ರಾಣಿ ವೇದಿಕೆ ಸೇರಿದಂತೆ ಒಟ್ಟು ೦೨ ವೇದಿಕೆಗಳನ್ನು ನಿರ್ಮಿಸಲಾಗಿದೆ.
ಮಾ. ೨೩ ರಂದು ಸಂಜೆ ೪ ಗಂಟೆಗೆ ಮುಖ್ಯ ವೇದಿಕೆಯಾದ ಶ್ರೀ ಪ್ರೌಢದೇವರಾಯ ವೇದಿಕೆಯಲ್ಲಿ ಆನೆಗೊಂದಿ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪರಮಪೂಜ್ಯ ವೇದಮೂರ್ತಿ ಶ್ರೀ ಕಲ್ಲಯ್ಯ ಅಜ್ಜನವರು ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ವಿಜಯನಗರ ಸಾಮ್ರಾಜ್ಯದ ಮಾತೃ ಸ್ಥಾನ ಆನೆಗೊಂದಿ ಗ್ರಂಥ ಬಿಡುಗಡೆ ಮಾಡುವರು. ಕನ್ನಡ ಮತ್ತು ಸಂಸ್ಕೃತಿ, ಸಣ್ಣ ನೀರಾವರಿ ಹಾಗೂ ಜವಳಿ ಸಚಿವ ಗೋವಿಂದ ಕಾರಜೋಳ ಅವರು ಆನೆಗೊಂದಿ ಕುರಿತ ಮಾಹಿತಿ ಪುಸ್ತಕ ಬಿಡುಗಡೆ ಮಾಡುವರು. ಪ್ರವಾಸೋದ್ಯಮ, ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಯುವಜನ ಸೇವಾ ಸಚಿವ ಜಿ. ಜನಾರ್ಧನ ರೆಡ್ಡಿ ಅವರು ಇದೇ ಸಂದರ್ಭದಲ್ಲಿ ಶ್ರೀಕೃಷ್ಣದೇವರಾಯರ ಕಂಚಿನ ಪುತ್ಥಳಿ ಅನಾವರಣಗೊಳಿಸುವರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ. ಪಾಟೀಲ, ಡಾ: ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುನೀಲ ವಲ್ಲ್ಯಾಪುರ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ, ಜಿ.ಪಂ. ಅಧ್ಯಕ್ಷೆ ಜ್ಯೋತಿ ನಾಗರಾಜ ಬಿಲ್ಗಾರ್, ಸಂಸದ ಶಿವರಾಮಗೌಡ, ಶಾಸಕರುಗಳಾದ ಅಮರೇಗೌಡ ಪಾಟೀಲ ಬಯ್ಯಾಪುರ, ಈಶಣ್ಣ ಗುಳಗಣ್ಣವರ್, ಶಶಿಲ್ ಜಿ. ನಮೋಶಿ, ಹೆಚ್.ಸಿ. ನೀರಾವರಿ, ಮನೋಹರ ಮಸ್ಕಿ, ಹಾಲಪ್ಪ ಆಚಾರ್, ಜಿ.ಪಂ. ಉಪಾಧ್ಯಕ್ಷೆ ಡಾ. ಸೀತಾ ಗೂಳಪ್ಪ ಹಲಗೇರಿ, ತಾ.ಪಂ., ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಸೇರಿದಂತೆ ಗಣ್ಯಾತಿ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟ ಶಿವರಾಜ್‌ಕುಮಾರ್ ಅವರು ಪಾಲ್ಗೊಳ್ಳಲಿದ್ದು, ಮಾಜಿ ಸಂಸದ ಹೆಚ್.ಜಿ. ರಾಮುಲು, ಆನೆಗೊಂದಿ ರಾಜವಂಶಸ್ಥರಾದ ಶ್ರೀರಂಗದೇವರಾಯಲು, ರಾಜಾ ರಾಮದೇವರಾಯಲು, ರಾಜಾ ನರಸಿಂಹದೇವರಾಯಲು, ಕೃಷ್ಣದೇವರಾಯಲು ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
ಮಾ. ೨೩ ಹಾಗೂ ೨೪ ರಂದು ಎರಡು ದಿನಗಳ ಕಾಲ ಆನೆಗೊಂದಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿದ್ದು, ಖ್ಯಾತ ಚಲನಚಿತ್ರ ಹಿನ್ನೆಲೆಗಾಯಕರಾದ ಬೆಂಗಳೂರಿನ ಅಜಯ್ ವಾರಿಯರ್ ಹಾಗೂ ಸಂಗಡಿಗರು, ರಾಜೇಶ್ ಕೃಷ್ಣನ್, ಹೇಮಂತ್, ಚೈತ್ರ, ಬಿ.ಕೆ. ಸುಮಿತ್ರಾ, ಚಲನಚಿತ್ರ ನಟ, ನಟಿಯರಾದ ಯಶ್, ಅನಿರುದ್ಧ್, ರಾಗಿಣಿ, ಹರಿಪ್ರಿಯ, ನೀತು, ಯಜ್ಞಾಶೆಟ್ಟಿ, ಹರೀಶ್ ಮುಂತಾದವರಿಂದ ಸಂಗೀತ ಹಾಗೂ ನೃತ್ಯ ವೈವಿಧ್ಯ, ಗಂಗಾವತಿಯ ಬಿ. ಪ್ರಾಣೇಶ್ ಅವರಿಂದ ಹಾಸ್ಯೋತ್ಸವ ಸೇರಿದಂತೆ, ಹರಿಯಾಣ, ಪಂಜಾಬ್, ಉತ್ತರಪ್ರದೇಶ, ರಾಜಸ್ಥಾನ ಮುಂತಾದ ವಿವಿಧ ರಾಜ್ಯಗಳ ಕಲಾವಿದರ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿವೆ.

ಆನೆಗೊಂದಿ ಉತ್ಸವ : ವೈವಿಧ್ಯಮಯ ಕಲಾ ತಂಡಗಳ ಜಾನಪದ ವಾಹಿನಿ

ಕೊಪ್ಪಳ ಮಾ. : ಆನೆಗೊಂದಿ ಉತ್ಸವದ ಅಂಗವಾಗಿ ಮಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಆನೆಗೊಂದಿಯ ಶ್ರೀ ದುರ್ಗಾದೇವಿ ದೇವಸ್ಥಾನ ಬಳಿಯಿಂದ ಮುಖ್ಯ ವೇದಿಕೆಯಾದ ಶ್ರೀ ಪ್ರೌಢದೇವರಾಯ ವೇದಿಕೆಯವರೆಗೆ ವೈವಿಧ್ಯಮಯ ಜಾನಪದ ಕಲಾತಂಡಗಳಿಂದ ಆಕರ್ಷಕ ಜಾನಪದ ವಾಹಿನಿ ಅನಾವರಣಗೊಳ್ಳಲಿದೆ.
ಮಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಆನೆಗೊಂದಿ ರಾಜ ವಂಶಸ್ಥರಿಂದ ಶ್ರೀ ದುರ್ಗಾದೇವಿ ಹಾಗೂ ಆನೆ ಅಂಬಾರಿಗೆ ಪೂಜೆ ನೆರವೇರಿಸುವುದರೊಂದಿಗೆ ಜಾನಪದ ಕಲಾವಾಹಿನಿಗೆ ಅಧಿಕೃತ ಚಾಲನೆ ದೊರೆಯಲಿದ್ದು, ಮೆರವಣಿಗೆ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ಮುಖ್ಯ ವೇದಿಕೆಯಾದ ಶ್ರೀ ಪ್ರೌಢದೇವರಾಯ ವೇದಿಕೆಯವರೆಗೆ ವೈವಿಧ್ಯಮಯ ಜಾನಪದ ಕಲಾ ತಂಡದೊಂದಿಗೆ ಸಾಗಲಿದೆ. ಜಾನಪದ ಕಲಾವಾಹಿನಿಯ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಉದ್ಘಾಟಿಸುವರು. ಜಾನಪದ ಕಲಾವಾಹಿನಿಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು ಕಲಾವಾಹಿನಿಯಲ್ಲಿ ಮುಂಚೂಣಿಯಲ್ಲಿದ್ದರೆ, ವಿವಿಧ ಜಾನಪದ ಕಲಾ ತಂಡಗಳು ತಮ್ಮ ಕಲಾ ಪ್ರದರ್ಶನದೊಂದಿಗೆ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಜಾನಪದ ಕಲಾವಾಹಿನಿಯಲ್ಲಿ ಭಾಗವಹಿಸುವ ವಿವಿಧ ಕಲಾ ತಂಡಗಳ ವಿವರ ಇಂತಿದೆ. ರಾಮನಗರದ ಶಿವಣ್ಣ ಮತ್ತು ತಂಡದಿಂದ ಪೂಜಾ ಕುಣಿತ, ದಾವಣಗೆರೆಯ ಮಂಜಣ್ಣ ಮತ್ತು ತಂಡದಿಂದ ಡೊಳ್ಳು ಕುಣಿತ, ಶಿವಮೊಗ್ಗದ ಅರ್ಚನಾ ಮತ್ತು ತಂಡದಿಂದ ಮಹಿಳಾ ಡೊಳ್ಳು ಕುಣಿತ, ತುಮಕೂರಿನ ಹೊಸಳಯ್ಯ ಹಾಗೂ ತಂಡದಿಂದ ವೀರಭದ್ರ ಕುಣಿತ, ಮಂಡ್ಯದ ಸತೀಶ್ ಕುಮಾರ ಮತ್ತು ತಂಡದಿಂದ ಗಾರುಡಿ ಗೊಂಬೆ, ದಂಡಿನಶಿವರದ ಡಿ.ಎಸ್. ಗಂಗಾಧರ ಗೌಡ ತಂಡದಿಂದ ಸೋಮನ ಕುಣಿತ, ಶ್ರೀರಂಗಪಟ್ಟಣದ ಕೊಡಿಯಾಲಸಿದ್ದೇಗೌಡ ತಂಡದಿಂದ ಪಟ ಕುಣಿತ, ಕೆರೂರಿನ ಕುಶಾಲಪ್ಪ ತಂಡದಿಂದ ಏಕತಾರಿ ಭಜನೆ, ತುಮಕೂರಿನ ವಿಶ್ವನಾಥ ಮತ್ತು ಸಂಗಡಿಗರಿಂದ ಚಿಟ್ಟಿಮೇಳ, ಬೆಂಗಳೂರಿನ ಮಹದೇವ ತಂಡದಿಂದ ಕಂಸಾಳೆ, ಹಾವೇರಿ ಜಿಲ್ಲೆ ಲಿಂಗದಳ್ಳಿಯ ಮಹೇಶ್‌ಗೌಡ ತಂಡದಿಂದ ಸಂಬಾಳ ವಾದನ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೆಂಕಟೇಶ್ ತಂಡದಿಂದ ತಮಟೆವಾದ್ಯ, ದಾವಣಗೆರೆಯ ವಿ. ಉಮೇಶ ತಂಡದಿಂದ ನಗಾರಿ ವಾದ್ಯ, ಜಗಳೂರಿನ ಲಿಂಬ್ಡಿಬಾಯಿ ತಂಡದಿಂದ ಲಂಬಾಣಿ ನೃತ್ಯ, ಇಟಗಿಯ ಪ್ಯಾಟಿ ಬಸವೇಶ್ವರ ಜಾನಪದ ಕಲಾಸಂಘದ ಸಿದ್ದಲಿಂಗಯ್ಯ ಚೌಡಿ ಅವರಿಂದ ಕರಡಿ ಮಜಲು, ಕೊಪ್ಪಳದ ಕರ್ನಾಟಕ ಬ್ರಾಸ್ ಬ್ಯಾಂಡ್ ಕಂಪನಿಯ ಪ್ರಕಾಶ ಭಜಂತ್ರಿ ತಂಡದಿಂದ ಬ್ಯಾಂಜೋಮೇಳ, ಬಿಜಾಪುರದ ಸುರೇಶ ಭಜಂತ್ರಿ ತಂಡದಿಂದ ಖಣಿ ಹಲಿಗೆ, ಕಿನ್ನಾಳದ ಕಾಶಿವಿಶ್ವನಾಥ ತಂಡದಿಂದ ಕರಡಿ ಮಜಲು, ಶಿವಪುರದ ಹನುಮಂತಪ್ಪ ಮಾಸ್ತರ್ ತಂಡದಿಂದ ಬ್ಯಾಂಜೋ ಮೇಳ, ಹನುಮಾಪುರದ ಕೆಂಚಪ್ಪ ಫಕೀರಪ್ಪ ಕುರಿ ತಂಡದಿಂದ ಡೊಳ್ಳು ಕುಣಿತ, ಕೊಪ್ಪಳದ ಬಸವೇಶ್ವರ ಜಾನಪದ ಕಲಾ ತಂಡದಿಂದ ಹಲಿಗೆ ಮೇಳ, ನಾವಲಗಿಯ ಮಲ್ಲಪ್ಪ ಹೂಗಾರ ಮತ್ತು ತಂಡದಿಂದ ಸಂಭಾಳ ವಾದನ, ಕೂಡ್ಲಿಗಿಯ ವೀಣಾ ಕಲಾ ಸಂಘದಿಂದ ಮಹಿಳಾ ಭಜನೆ, ಬಳ್ಳಾರಿಯ ಮೋಹನ ಮತ್ತು ತಂಡದಿಂದ ತಾಷರಂಡೋಲ, ವೀರಯ್ಯ ಸಂಶಿಮಠ ಅವರಿಂದ ವೀರಗಾಸೆ, ಗಂಗಾವತಿಯ ವೀರಣ್ಣ ಮರಿಯಪ್ಪ ನಾಗಲೀಕರ ತಂಡದಿಂದ ಸಮಾಳ ವಾದನ, ಮರಿಯಮ್ಮನಹಳ್ಳಿಯ ಮಾತಾ ಮಂಜಮ್ಮ ಜೋಗತಿ ತಂಡದಿಂದ ಜೋಗತಿ ಕುಣಿತ ಹೀಗೆ ಹತ್ತು ಹಲವು ವೈವಿಧ್ಯಮಯ ತಂಡಗಳು ಜಾನಪದ ವಾಹಿನಿಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದು ಜಾನಪದ ರಸದೌತಣ ಸವಿಯಬಹುದಾಗಿದೆ.

ಆನೆಗೊಂದಿ ಉತ್ಸವ :ವಿಚಾರ ಸಂಕಿರಣ, ಕವಿ ಕಾವ್ಯ ಕುಂಚ ಕಾರ್ಯಕ್ರಮಗಳು

ಕೊಪ್ಪಳ ಮಾ. : ಆನೆಗೊಂದಿ ಉತ್ಸವದ ಅಂಗವಾಗಿ ವಿಚಾರವಾದಿಗಳ, ಸಂಶೋಧಕರನ್ನು ಚಿಂತನ-ಮಂಥನಕ್ಕೆ ಹಚ್ಚಿಸುವಂತೆ ವಿಚಾರ ಸಂಕಿರಣ, ಕವಿತೆಯಲ್ಲಿ ಕಲ್ಪನೆಯನ್ನು ಸೃಷ್ಠಿಸುವಂತಹ ಕವಿ ಕಾವ್ಯ ಜೊತೆಗೆ ಅದಕ್ಕೆ ರೂಪ ನೀಡುವ ಕುಂಚ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ.
ಮಾ. ೨೪ ರಂದು ಬೆಳಿಗ್ಗೆ ೧೧ ಗಂಟೆಗೆ ಆನೆಗೊಂದಿ ಗ್ರಾಮದಲ್ಲಿ ನಿರ್ಮಿಸಿರುವ ಕುಪ್ಪಮ್ಮ ರಾಣಿ ವೇದಿಕೆಯಲ್ಲಿ ಆನೆಗೊಂದಿ ಇತಿಹಾಸ ಮತ್ತು ಸಂಸ್ಕೃತಿ ಕುರಿತಂತೆ ವಿಶೇಷ ವಿಚಾರಸಂಕಿರಣ ಏರ್ಪಡಿಸಲಾಗಿದ್ದು, ಪ್ರೊ. ಲಕ್ಷ್ಮಣ ತೆಲಗಾವಿ ಅವರು ವಿಚಾರಸಂಕಿರಣದ ಅಧ್ಯಕ್ಷತೆ ವಹಿಸುವರು. ಕೊಪ್ಪಳದ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ಅವರಿಂದ ಆಶಯದ ನುಡಿ, ನಂತರ ಗಂಗಾವತಿಯ ಕೆ.ಎಸ್.ಸಿ. ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಅವರು ಆನೆಗೊಂದಿ, ರಾಜಕೀಯ ಪರಂಪರೆ ಕುರಿತು ತಮ್ಮ ಪ್ರಬಂಧ ಮಂಡನೆ ಮಾಡುವರು. ಜೊತೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ. ಕೊಟ್ರೇಶ್ ಅವರು ಆನೆಗೊಂದಿ, ಸಾಂಸ್ಕೃತಿ ಪರಂಪರೆ ಕುರಿತು ತಮ್ಮ ಪ್ರಬಂಧ ಮಂಡಿಸುವರು. ಕಾರ್ಯಕ್ರಮದಲ್ಲಿ ಗಂಗಾವತಿಯ ಹೆಚ್.ಆರ್.ಎಸ್.ಎಂ. ಕಾಲೇಜಿನ ಉಪನ್ಯಾಸಕ ಪ್ರೊ. ಎಫ್.ಎಚ್. ಚಿತ್ರಗಾರ, ಸರ್ಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕ ಡಾ. ನಾರಾಯಣ ಕಂದಗಲ್, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕ ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್, ಕುಕನೂರಿನ ಹೊಸಮನಿ ಪದವಿ ಕಾಲೇಜು ಪ್ರಾಚಾರ್ಯ ಪ್ರೊ. ಪವನಕುಮಾರ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಾ. ೨೪ ರಂದು ಮಧ್ಯಾಹ್ನ ೧೨-೩೦ ಗಂಟೆಗೆ ಯುವ ಕವಿ ಕಾವ್ಯ ಕುಂಚ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಬಾಗಲಕೋಟೆಯ ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಈ ಕಾರ್ಯಕ್ರಮದಲ್ಲಿ ಕವಿಗಳಾದ ಸಲೀಮಾ ಎಂ. ಮಂಗಳೂರು, ರಮೇಶ್ ಗಬ್ಬೂರ, ಜಿ.ಎಸ್. ಗೋನಾಳ, ಸಿರಾಜ್ ಬಿಸರಳ್ಳಿ, ಈಶಪ್ಪ ಮಳಗಿ, ಎನ್. ಜಡಿಯಪ್ಪ, ನಟರಾಜ ಸೋನಾರ, ಸೋಮು ಕುದರಿಹಾಳ, ಸತೀಶ ಎಚ್.ಆರ್., ಮಮ್ತಾಜ್ ಬೇಗಂ, ರುದ್ರಮ್ಮ ಆಶಿನಾಳ, ಆಂಜನೇಯ ಟಿ., ರವೀಂದ್ರ ಬಾಕಳೆ ಅವರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಗಾಯಕರುಗಳಾದ ದೊಡ್ಡಯ್ಯ ವಿ. ಕಲ್ಲೂರ, ಕೆ.ಎಫ್. ಮುದ್ದಾಬಳ್ಳಿ, ಹಣಮಂತರಾವ್ ಕುಲಕರ್ಣಿ, ವೆಂಕಟೇಶ ದಾಸನಾಳ, ಜುಜ್ಜವರಪು ನಾಗೇಶ್ವರರಾವ್, ಹಂದ್ರಾಳ ವಿಶ್ವನಾಥ, ಶಿವಪ್ಪ ಹುಳ್ಳ, ಸುರಯ್ಯ ಬೇಗಮ್ ಮುದ್ದಾಬಳ್ಳಿ, ಎಸ್.ಎಸ್.ಎಂ. ರುದ್ರಾಣಿ ಕಂಪ್ಲಿ, ವಿದ್ಯಾಶ್ರೀ ಸಾಲಮಠ, ಗೀತಾ ಕಾಶೆಟ್ಟಿ, ಮತ್ತು ಛತ್ರಪ್ಪ ತಂಬೂರಿ ಅವರು ಭಾಗವಹಿಸುವರು. ಕವಿಗಳ ಕಾವ್ಯಕ್ಕೆ ಗಾಯಕರು ಜೀವ ನೀಡಿದರೆ, ಅದಕ್ಕೆ ರೂಪ ನೀಡಲು ಕುಂಚ ಕಲಾವಿದರುಗಳಾದ ಚಂದ್ರಶೇಖರ ಕಲ್ಮನಿ, ಜಿ.ಕೆ. ಬಡಿಗೇರ, ಅಣ್ಣಪ್ಪ ಚಿತ್ರಗಾರ, ವೀರಾಚಾರಿ ಕಮ್ಮಾರ, ಮಲ್ಲಿಕಾರ್ಜುನ ಸುರತಾನಿ, ಪ್ರಶಾಂತ, ಯಶೋಧಾ ಪತ್ತಾರ, ಸಾಗರ ಚಿತ್ರಗಾರ ಹಾಗೂ ಹನಿರಾಜ ಅವರು ಭಾಗವಹಿಸುವರು. ಈ ಕಾರ್ಯಕ್ರಮಕ್ಕೆ ಕಸಾಪ ಗಂಗಾವತಿ ತಾಲೂಕು ಅಧ್ಯಕ್ಷ ಬಸವರಾಜ ಕೋಟೆ ಅವರ ಸಂಯೋಜನೆಯಿದ್ದು, ಕೊಪ್ಪಳ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಕೆ.ಎಫ್. ಮುದ್ದಾಬಳ್ಳಿ ಅವರ ಸಂಗೀತ ಸಂಯೋಜನೆಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.

Thursday, March 17, 2011

ಪಕ್ಷಾಂತರ ನಿಷೇದ ಕಾಯ್ದೆಗೆ ತಿದ್ದುಪಡಿ

ಜೆಡಿಎಸ್ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುತ್ತಿರುವ ಪಕ್ಷಾಂತರ ನಿಷೇದ ಕಾಯ್ದೆಗೆ ತಿದ್ದುಪಡಿ ತರಲಾಗುವುದೆಂದು ಜೆಡಿ ಎಸ್ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಕೀಲ್ ನವಾಜ್ ಹೇಳಿದ್ದಾರೆ. ಅವರು ಇಂದು ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಶಾಸಕರಾಗಿದ್ದ ಕರಡಿ ಸಂಗಣ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಿರುವುದು ಆಘಾತ ತಂದಿದೆ. ಜಾತ್ಯತೀತ ಮೌಲ್ಯಗಳ ಮುಖಾಂತರ ಮತ ಪಡೆದು ಆಯ್ಕೆಯಾಗಿದ್ದ ಸಂಗಣ್ಣ ಕರಡಿ ಕ್ಷೇತ್ರದ ಅಭಿವೃದ್ದಿಗಾಗಿ ಪಕ್ಷಾಂತರ ೆನ್ನುವುದು ಮತದಾರರಿಗೆ ಮಾಡುತ್ತಿರುವ ಅಪಮಾನ ಎಂದು ಖಂಡಿಸಿದರು. ಈ ಸಂದರ್ಭದಲ್ಲಿ ಜೆಡಿ ಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಬಾಬಾ ಅರಗಂಜಿ ಗೈರುಹಾಜರಿ ಎದ್ದು ಕಂಡಿತು, ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಕೀಲ್ ನವಾಜ್ ಜಿಲ್ಲಾಧ್ಯಕ್ಷ ಬಾಬಾ ಅರಗಂಜಿ ಪಕ್ಷದಲ್ಲೇ ಇದ್ದಾರೆ ಎಂದರು.

371ನೇ ಕಲಂ ಹೋರಾಟ ರೂಪಿಸಲು ಪೂರ್ವಭಾವಿ ಸಭೆ ಮಾರ್ಚ 19ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ

ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ 371ನೇ ಕಲಂ ತಿದ್ದುಪಡಿಗೆ ಆಗ್ರಹಿಸಿ ಹೋರಾಟ ರೂಪಿಸಲು ಪೂರ್ವಭಾವಿ ಸಭೆ ಮಾರ್ಚ 19ರಂದು ಬೆಳಿಗ್ಗೆ ೧೦.30ಕ್ಕೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಕರೆಯಲಾಗಿದೆ.

ಜಿಲ್ಲೆಯ ಎಲ್ಲ ಪಕ್ಷಗಳ ಮುಖಂಡರು, ಸಂಘ, ಸಂಸ್ಥೆ, ಸಂಘಟಕರು ಭಾಗವಹಿಸುವಂತೆ ಸಂವಿಧಾನದ ಅನುಚ್ಛೇದ ೩೭೧ ರತಿದ್ದುಪಡಿಯ ಜಿಲ್ಲಾ ಹೋರಾಟ ಸಮಿತಿ ಹೇಳಿದೆ. ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ರೈಲ್ ರೋಕೋ, ರಸ್ತಾ ರೋಖೋ, ಸರದಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಮಿತಿಯ ಮುಖಂಡರು ತಿಳಿಸಿದ್ದಾರೆ.

Wednesday, March 16, 2011

ಆನೆಗೊಂದಿ ಉತ್ಸವ : ಉದ್ಘಾಟನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಕೊಪ್ಪಳ ಮಾ. : ಐತಿಹಾಸಿಕ ಆನೆಗೊಂದಿ ಉತ್ಸವ ಇದೇ ೨೩, ೨೪ ರಂದು ಎರಡು ದಿನಗಳ ಕಾಲ ಆನೆಗೊಂದಿಯಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಮಾ. ೨೩ ರಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉತ್ಸವದ ಉದ್ಘಾಟನೆ ನೆರವೇರಿಸುವರು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಹೇಳಿದ್ದಾರೆ.
ಆನೆಗೊಂದಿಯ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಆನೆಗೊಂದಿ ಉತ್ಸವವನ್ನು ಈ ಬಾರಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುವುದು. ಜಿಲ್ಲೆಯ ಸಮಸ್ತ ಜನರು ಉತ್ಸವದ ಯಶಸ್ವಿಗೆ ಸಹಕರಿಸಬೇಕು. ಅಧಿಕಾರಿಗಳಿಗೆ ಈಗಾಗಲೆ ಉತ್ಸವದ ತಯಾರಿಗಾಗಿ ಹಲವಾರು ಕೆಲಸ ಕಾರ್ಯಗಳನ್ನು ನಿಯೋಜಿಸಲಾಗಿದೆ. ಅದರಂತೆ ಅಧಿಕಾರಿಗಳು ಕಾರ್ಯತತ್ಪರರಾಗಿದ್ದು, ಅವರಿಗೆ ಸ್ಥಳೀಯ ಸಹಕಾರ ಅಗತ್ಯವಾಗಿದೆ. ಆನೆಗೊಂದಿಯ ಪ್ರಮುಖ ರಸ್ತೆಗಳ ಸುಧಾರಣೆ ಮತ್ತು ಸ್ವಚ್ಛತೆ, ಆನೆಗೊಂದಿ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು. ಹಂಪಿ ಉತ್ಸವ ಮಾದರಿಯಲ್ಲಿ ಆನೆಗೊಂದಿ ಉತ್ಸವವನ್ನು ಕೈಗೊಳ್ಳಲಾಗುವುದು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಜೊತೆಗೆ ಅಂತರ್ ರಾಜ್ಯ ಕಲಾವಿದರಿಗೂ ಉತ್ಸವಕ್ಕೆ ಆಮಂತ್ರಿಸಲಾಗುವುದು. ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಎಸ್ ಸವದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ, ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಚುನಾಯಿತ ಪ್ರತಿನಿಧಿಗಳು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಉತ್ಸವದ ಅಂಗವಾಗಿ ವಿಶೇಷ ಬಸ್‌ಗಳನ್ನು ಓಡಿಸಲಾಗುವುದು, ಉತ್ಸವಕ್ಕೆ ಬರುವ ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ವಿಶೇಷ ಆಸ್ಪತ್ರೆ ಸ್ಥಾಪಿಸಲಾಗುವುದು. ಊರಿನ ಪ್ರಮುಖ ಕಟ್ಟಡ ಮತ್ತು ಶಾಲೆಗಳಿಗೆ ಸುಣ್ಣ, ಬಣ್ಣಗಳಿಂದ ವಿಶೇಷ ಅಲಂಕಾರಗೊಳಿಸಲಾಗುವುದು. ಈಗಾಗಲೆ ನೂತನ ವೇದಿಕೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆಲಸ ಭರದಿಂದ ಸಾಗಿದೆ. ಅಧಿಕಾರಿಗಳು ಉತ್ಸವದ ಯಶಸ್ವಿಗೆ ಸಹಕರಿಸಬೇಕು. ಅದರೊಂದಿಗೆ ಸಾರ್ವಜನಿಕರು ಕೂಡ ಒಗ್ಗೂಡಿ ಉತ್ಸವ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಸಭೆಯಲ್ಲಿ ಭಾಗವಹಿಸಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಮಾತನಾಡಿ, ಉತ್ಸವದ ಯಶಸ್ವಿಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕೈಜೋಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು ಅವರು ಸಭೆಯಲ್ಲಿ ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಮೂರ್ತಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಆನೆಗೊಂದಿ ಉತ್ಸವ ಉಪಸಮಿತಿಯ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.

ಪಿ.ಯು.ಸಿ. ಪರೀಕ್ಷೆ : ನಿಷೇಧಾಜ್ಞೆ ಜಾರಿ :೯೩೫೬ ವಿದ್ಯಾರ್ಥಿಗಳು

ಕೊಪ್ಪಳ ಮಾ. : ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ ಮಾ. ೧೭ ರಿಂದ ೩೦ ರವರೆಗೆ ಜಿಲ್ಲೆಯ ೧೧ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ೨೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ.
ಪಿ.ಯು.ಸಿ. ವಾರ್ಷಿಕ ಪರೀಕ್ಷೆಗಳು ಸುಗಮವಾಗಿ ಹಾಗೂ ಶಾಂತಿಯುತವಾಗಿ ನಡೆಯಲು ಅನುಕೂಲವಾಗುವಂತೆ ಮಾ. ೧೭ ರಂದು ಬೆಳಿಗ್ಗೆ ೦೬ ಗಂಟೆಯಿಂದ ಮಾ. ೩೦ ರಂದು ಸಾಯಂಕಾಲ ೦೬ ಗಂಟೆಯವರೆಗೆ ಸಿ.ಆರ್.ಪಿ.ಸಿ. ಕಲಂ ೧೪೪ರ ಅನ್ವಯ ನಿಷೇಧಾಜ್ಞೆಯನ್ನು ಪರೀಕ್ಷಾ ಕೇಂದ್ರದ ೨೦೦ ಮೀ. ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ. ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿ ಪರೀಕ್ಷಾ ಸಮಯದಲ್ಲಿ ಜೆರಾಕ್ಸ್ ಹಾಗೂ ಕಂಪ್ಯೂಟರ್ ಕೇಂದ್ರಗಳನ್ನು ನಿಷೇಧಿಸಿದೆ. ಸಾರ್ವಜನಿಕರುಲ ಯಾವುದೇ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವುದು, ಸಾರ್ವಜನಿಕರ ಸಭೆ, ವಿಜಯೋತ್ಸವ, ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಮದುವೆ, ಶವ ಸಂಸ್ಕಾರ, ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧಾಜ್ಞೆ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಪಿ.ಯು.ಸಿ. ಪರೀಕ್ಷೆಗೆ ಜಿಲ್ಲೆಯಲ್ಲಿ ೯೩೫೬ ವಿದ್ಯಾರ್ಥಿಗಳು
ಕೊಪ್ಪಳ ಮಾ. : ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ ಮಾ. ೧೭ ರಿಂದ ೩೦ ರವರೆಗೆ ಜಿಲ್ಲೆಯ ೧೧ ಕೇಂದ್ರಗಳಲ್ಲಿ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು ೯೩೫೬ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ.
ಪಿ.ಯು.ಸಿ. ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಜಿಲ್ಲೆಯಲ್ಲಿ ಒಟ್ಟು ೧೧ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬಾರಿ ಜಿಲ್ಲೆಯಲ್ಲಿ ಒಟ್ಟು ೯೩೫೬ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೊಪ್ಪಳದ ಶ್ರೀ ಗವಿಸಿದ್ದೇಶ್ವರ .ಪೂ. ಕಾಲೇಜಿನಲ್ಲಿ- ೧೩೩೧ ವಿದ್ಯಾರ್ಥಿಗಳು, ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು- ೯೬೩, ಸರ್ಕಾರಿ .ಪೂ. ಬಾಲಕಿಯರ ಕಾಲೇಜು- ೯೮೨, ಯಲಬುರ್ಗಾದ ಸರ್ಕಾರಿ .ಪೂ. ಕಾಲೇಜು- ೮೧೬, ಕುಕನೂರಿನ ವಿದ್ಯಾನಂದ ಗುರುಕುಲ .ಪೂ. ಕಾಲೇಜು- ೫೭೧, ಕುಷ್ಟಗಿಯ ಸರ್ಕಾರಿ .ಪೂ. ಬಾಲಕರ ಕಾಲೇಜು- ೧೦೬೨, ತಾವರಗೇರಾದ ಸರ್ಕಾರಿ .ಪೂ. ಬಾಲಕಿಯರ ಕಾಲೇಜು- ೩೮೧, ಗಂಗಾವತಿಯ ಸರ್ಕಾರಿ .ಪೂ. ಬಾಲಕರ ಕಾಲೇಜು- ೧೦೮೭, ಹೆಚ್.ಆರ್. ಸರೋಜಮ್ಮ .ಪೂ. ಬಾಲಕಿಯರ ಕಾಲೇಜು- ೫೨೨, ಸರ್ಕಾರಿ ಎಸ್.ಎಮ್.ಎನ್.ಎಮ್. .ಪೂ. ಬಾಲಕಿಯರ ಕಾಲೇಜು- ೮೦೪ ಹಾಗೂ ಕಾರಟಗಿಯ ಸರ್ಕಾರಿ .ಪೂ. ಬಾಲಕರ ಕಾಲೇಜಿನಲ್ಲಿ ೮೩೭ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ದೊಡ್ಡಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನೆಗೊಂದಿ ಉತ್ಸವ : ಮಾ. ೨೩ ರಿಂದ ವಿವಿಧ ಕ್ರೀಡಾ ಸ್ಪರ್ಧೆ

ಕೊಪ್ಪಳ ಮಾ. : ಜಿಲ್ಲಾ ಆಡಳಿತ ವತಿಯಿಂದ ಇದೇ ೨೩ ಮತ್ತು ೨೪ ರಂದು ಐತಿಹಾಸಿಕ ಆನೆಗೊಂದಿ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದ್ದು, ಈ ಉತ್ಸವದ ಅಂಗವಾಗಿ ಜಾನಪದ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಆನೆಗೊಂದಿ ಉತ್ಸವದ ಅಂಗವಾಗಿ ಪ್ರಮುಖ ಆಕರ್ಷಣೆಯಾಗಿರುವ ಕುಸ್ತಿ ಪಂದ್ಯಾವಳಿಯಲ್ಲಿ ರೋಮಾಂಚಕಾರಿ ಆನೆಗುಂದಿ ಕೇಸರಿ ಕುಸ್ತಿ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ಮಾ. ೨೩ ಮತ್ತು ೨೪ ರಂದು ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.
ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ವಿವಿಧ ಕ್ರೀಡೆಗಳನ್ನು ಏರ್ಪಡಿಸಿದ್ದು, ಇದರಲ್ಲಿ ಪುರುಷರಿಗಾಗಿ ೧೨ ಕಿ.ಮೀ ಮ್ಯಾರಾಥಾನ್ ಓಟ, ಭಾರ ಎತ್ತಿ ಬಸ್ಕಿ ಒಡೆಯುವ ಸ್ಪರ್ಧೆ, ಕಬ್ಬಡ್ಡಿ ಪಂದ್ಯಾವಳಿಗಳು ಸೇರಿದಂತೆ ೫೫ ಕೆ.ಜಿ. ೭೫ ಕೆ.ಜಿ.ಯ ವಿವಿಧ ವಿಭಾಗಗಳಲ್ಲಿ ಕುಸ್ತಿ ಪಂದ್ಯಾವಳಿಗಳು ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಹೊನಲು ಬೆಳಕಿನ ವ್ಹಾಲಿಬಾಲ್ ಮತ್ತು ೬ ಕಿ.ಮೀ. ಮ್ಯಾರಾಥಾನ್ ಮುಂತಾದ ಆಕರ್ಷಕ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.
ವಿವಿಧ ಸ್ಪರ್ಧೆಗಳಿಗೆ ಮಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಚಾಲನೆ ದೊರೆಯಲಿದ್ದು, ಪುರುಷರಿಗಾಗಿ ಗ್ರಾಮೀಣ ಕ್ರೀಡೆಯಾಗಿರುವ ಭಾರ ಎತ್ತಿ ಬಸ್ಕಿ ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. ೯ ಸಾವಿರ, ದ್ವಿತೀಯ ೪ ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ೪ ಸಾವಿರ ರೂ.ಗಳ ಬಹುಮಾನ ನೀಡಲಾಗುವುದು. ಇದೇ ಸಂದರ್ಭದಲ್ಲಿ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕಬಡ್ಡಿ ಪಂದ್ಯದಲ್ಲಿ ವಿಜೇತರಾದವರಿಗೆ ಪ್ರಥಮ ಸ್ಥಾನ ಪಡೆದ ತಂಢಕ್ಕೆ ೨೦ ಸಾವಿರ, ದ್ವಿತೀಯ ೧೫ ಸಾವಿರ ಮತ್ತು ತೃತೀಯ ಸ್ಥಾನ ಪಡೆದವರಿಗೆ ೧೦ ಸಾವಿರ ರೂ.ಗಳ ನಗದು ಪುರಸ್ಕಾರ ನೀಡಲಾಗುವುದು. ಉತ್ಸವದ ಅಂಗವಾಗಿ ಆಕರ್ಷಕ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದ್ದು ಇದರಲ್ಲಿ ೫೫ ಕೆ.ಜಿ., ೬೨, ೬೮, ೭೫ ಹಾಗೂ ಅದಕ್ಕೂ ಮೇಲ್ಪಟ್ಟ ತೂಕ ಹೊಂದಿರುವವರ ಕುಸ್ತಿ ಪಂದ್ಯ ನಡೆಯಲಿವೆ. ಕುಸ್ತಿ ಪಂದ್ಯದ ೫೫ ಕೆ.ಜಿ. ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ ೫ ಸಾವಿರ, ದ್ವಿತೀಯ ೩ ಸಾವಿರ ಹಾಗೂ ತೃತೀಯ ೨ ಸಾವಿರ ರೂ.ಗಳನ್ನು ನೀಡಲಾಗುವುದು. ಅದೇ ರೀತಿಯಾಗಿ ೬೨ ಕೆ.ಜಿ. ವಿಭಾಗದಲ್ಲಿ ಕ್ರಮವಾಗಿ ೬ ಸಾವಿರ, ೪ ಸಾವಿರ, ಹಾಗೂ ೩ ಸಾವಿರ. ೬೮ ಕೆ.ಜಿ. ವಿಭಾಗದಲ್ಲಿ ಪ್ರಥಮ ೭ ಸಾವಿರ, ದ್ವಿತೀಯ ೫ ಸಾವಿರ, ತೃತೀಯ ೪ ಸಾವಿರ ರೂ.ಗಳು. ೭೫ ಕೆ.ಜಿ. ವಿಭಾಗದಲ್ಲಿ ಪ್ರಥಮ ೧೦ ಸಾವಿರ, ದ್ವಿತೀಯ ೮ ಸಾವಿರ, ತೃತೀಯ ೫ ಸಾವಿರ ರೂ.ಗಳನ್ನು ನೀಡಲಾಗುವುದು ಅಲ್ಲದೆ ೭೫ ಕೆ.ಜಿ.ಗೆ ಮೇಲ್ಪಟ್ಟ ವಿಭಾಗದ ಆನೆಗೊಂದಿ ಕೇಸರಿ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ೨೦ ಸಾವಿರ, ದ್ವಿತೀಯ ೧೫ ಸಾವಿರ ಹಾಗೂ ತೃತೀಯ ೧೦ ಸಾವಿರ ರೂ.ಗಳ ನಗದು ಪುರಸ್ಕಾರ ಹಾಗೂ ವಿಜೇತ ಎಲ್ಲಾ ಕ್ರೀಡಾ ಪಟುಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು.
ಪುರುಷರಿಗಾಗಿ ೧೨ ಕಿ.ಮೀ. ಗಳ ಮ್ಯಾರಾಥಾನ್ ಸ್ಪರ್ಧೆಯು ಮಾ. ೨೪ ರಂದು ಗಂಗಾವತಿ ಬಸ್ ನಿಲ್ದಾಣ ಬಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಬೆಳಿಗ್ಗೆ ೭.೩೦ ಗಂಟೆಗೆ ಪ್ರಾರಂಭಗೊಂಡು ಆನೆಗೊಂದಿಯ ಉತ್ಸವದ ವೇದಿಕೆಯಲ್ಲಿ ಈ ಓಟ ಕೊನೆಗೊಳ್ಳುವುದು ಇದರಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. ೮,೦೦೦, ದ್ವಿತೀಯ ೬,೦೦೦ ಮತ್ತು ತೃತೀಯ ಬಹುಮಾನವಾಗಿ ೪,೦೦೦ ರೂ. ಗಳನ್ನು ನೀಡಲಾಗುವುದು.
ಉತ್ಸವದ ನಿಮಿತ್ಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸುವ ನಿಟ್ಟಿನಲ್ಲಿ ಮಹಿಳೆಯರಿಗೂ ಸಹ ರಂಗೋಲಿ ಸ್ಪರ್ಧೆ, ವ್ಹಾಲಿಬಾಲ್ ಸ್ಪರ್ಧೆ ಹಾಗೂ ಮ್ಯಾರಾಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಹಿಳೆಯರ ೬ ಕಿ.ಮೀ. ಮ್ಯಾರಾಥಾನ್ ಓಟವು ಹನುಮನಹಳ್ಳಿಯ ದೇವಸ್ಥಾನದಿಂದ ಪ್ರಾರಂಭಗೊಂಡು ಉತ್ಸವದ ವೇದಿಕೆಯಲ್ಲಿ ಓಟ ಕೊನೆಗೊಳ್ಳುವುದು. ಇದರಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ರೂ. ೮,೦೦೦, ದ್ವಿತೀಯ ೬,೦೦೦ ಮತ್ತು ತೃತೀಯ ಬಹುಮಾನವಾಗಿ ೪,೦೦೦ ರೂ. ಗಳನ್ನು ನೀಡಲಾಗುವುದು. ಮಹಿಳೆಯರಿಗಾಗಿ ಮಾ. ೨೪ ರಂದು ಬೆಳಿಗ್ಗೆ ೦೯ ಗಂಟೆಗೆ ಆನೆಗೊಂದಿಯ ಶ್ರೀ ರಂಗನಾಥ ದೇವಸ್ಥಾನದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. ೫೦೦೦, ದ್ವಿತೀಯ ೪೦೦೦ ಹಾಗೂ ತೃತೀಯ ೩,೦೦೦ ರೂ.ಗಳ ಬಹುಮಾನ ಸೇರಿದಂತೆ ಮಹಿಳೆಯರ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತ ಪ್ರಥಮ ಸ್ಥಾನಕ್ಕೆ ೧೫,೦೦೦, ದ್ವಿತೀಯ ೧೦,೦೦೦ ಮತ್ತು ತೃತೀಯ ೭,೦೦೦ಗಳನ್ನು ನೀಡಲಾಗುವುದು.
ಕುಸ್ತಿಯಲ್ಲಿ ಪಾಲ್ಗೊಳ್ಳಬಯಸುವ ಕ್ರೀಡಾಪಟುಗಳು ಮಾ. ೨೩ ರಂದು ಬೆಳಿಗ್ಗೆ ೯ ಗಂಟೆಯಿಂದ ೧೧ ಗಂಟೆಯೊಳಗಾಗಿ ತಮ್ಮ ತೂಕವನ್ನು ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿನ ಕ್ರೀಡಾ ಸಮಿತಿಯಲ್ಲಿ ನೊಂದಾಯಿಕೊಳ್ಳಬಹುದು. ನಂತರ ಬಂದಂತಹ ಕುಸ್ತಿ ಪಟುಗಳಿಗೆ ಸ್ಪರ್ಧೆಯಲ್ಲಿ ಅವಕಾಶ ನೀಡಲಾಗುವುದಿಲ್ಲ. ಹಾಗೂ ಕ್ರೀಡಾಕೂಟದಲ್ಲಿ ಗಂಗಾವತಿ ತಾಲೂಕು ಹೊರತುಪಡಿಸಿ ಬೇರೆ ಭಾಗಗಳಿಂದ ಭಾಗವಹಿಸುವ ಕ್ರೀಡಾಪಟುಗಳಿಗೆ ಸಾಮಾನ್ಯ ಬಸ್ ದರದ ಪ್ರಯಾಣ ಭತ್ಯೆಯನ್ನು ನೀಡಲಾಗುವುದು. ಅಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ವಾಸಸ್ಥಳ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ವಾಸಸ್ಥಳ ಪ್ರಮಾಣ ನೀಡಿದವರಿಗೆ ಮಾತ್ರ ಪ್ರಯಾಣ ಭತ್ಯೆಯನ್ನು ನೀಡಲಾಗುವುದು.
ಆನೆಗೊಂದಿ ಉತ್ಸವದ ಅಂಗವಾಗಿ ಏರ್ಪಡಿಸಲಾಗುತ್ತಿರುವ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ತಿಪ್ಪೇಸ್ವಾಮಿ, ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳು ತಾಲೂಕು ಕ್ರೀಡಾಂಗಣ ಹಾಗೂ ಕಾರ್ಯದರ್ಶಿಗಳು ಕ್ರೀಡಾ ಸಮಿತಿ, ಆನೆಗುಂದಿ- ೯೦೦೮೩ ೬೩೬೭೦, ಅಥವಾ ಸಿ.ಎ. ಪಾಟೀಲ್ ತರಬೇತುದಾರರು- ೯೩೪೨೩೮೭೯೩೫ ಇವರನ್ನು ಸಂಪರ್ಕಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.


Saturday, March 12, 2011

ಕವಿಸಮಯ -೪೫: ಕ್ರಾಂತಿ ಸೂರ್ಯನ ಕಂದೀಲು ಕಾವ್ಯ ವಿಮರ್ಶೆ

ಈ ವಾರ ದಿ.ಬಾಬುಸಾಬ ಬಿಸರಳ್ಳಿ ಮತ್ತು ಸಿರಾಜ್ ಬಿಸರಳ್ಳಿ ಇವರ ಕ್ರಾಂತಿ ಸೂರ್ಯನ ಕಂದೀಲು - ಕವನ ಸಂಕಲನದ ವಿಮರ್ಶೆ ಮತ್ತು ಚರ್ಚೆ ನಡೆಯಲಿದೆ.
ನಂತರ ಸಂವಾದ ಕಾರ್‍ಯಕ್ರಮ ನಡೆಯಲಿದೆ.
ಈ ಕವಿಸಮಯ ಕಾರ್‍ಯಕ್ರಮ ರವಿವಾರ ೧೨-೩-೨೦೧೧ ರಂದು ನಗರದ ಎನ್ ಜಿಓ ಭವನದಲ್ಲಿ ಸಂಜೆ ೪-೩೦ ಗಂಟೆಗೆ ಜರುಗಲಿದೆ. ಆಸಕ್ತರು ಮತ್ತು ಕವಿಗಳು ಭಾಗವಹಿಸಲು ಕವಿಸಮೂಹ ವಿನಂತಿಸಿದೆ. ವಿವರಗಳಿಗೆ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮, ಮಹೇಶ ಬಳ್ಳಾರಿ ೯೦೦೮೯೯೬೬೨೪,ಶಿವಪ್ರಸಾದ ಹಾದಿಮನಿ ೯೯೧೬೫೨೫೨೮೯ ಸಂಪರ್ಕಿಸಿ.

ಲಕ್ಕುಂಡಿ ಉತ್ಸವದ ಮಹಿಳಾ ಚಿಂತನ


ಇತ್ತೀಚಿಗೆ ಜರುಗಿದ ಲಕ್ಕುಂಡಿ ಉತ್ಸವದ ಮಹಿಳಾ ಚಿಂತನ ಚಾವಡಿಯಲ್ಲಿ ಮಾಧ್ಯಮದಲ್ಲಿ ಮಹಿಳೆ ಕುರಿತು ಕೊಪ್ಪಳದ ಪತ್ರಕರ್ತೆ ಸಾವಿತ್ರಿ ಮುಜುಮದಾರ ಮಾತನಾಡಿದರು.ವೇದಿಕೆಯಲ್ಲಿ ಶಿವಮೊಗ್ಗ ಸಹ್ಯಾದ್ರಿ ಸ್ನಾತಕ್ಕೋತ್ತರ ಕೇಂದ್ರದ ಡಾ.ಶುಭಾ ಮರವಂತೆ, ಡಾ.ವಿಜಯಶ್ರೀ ಹಿರೆಮಠ ,ಡಾ.ವೀಣಾ ಹೊಗಾರ, ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಡಾ.ಶಾಂತಾ ಇಮ್ರಾಪುರ ವಹಿಸಿದ್ದರು.

Thursday, March 10, 2011

ಕವನಗಳಲ್ಲಿ ಹೊಸ ಪರಿಭಾಷೆ ಇರಲಿ- ಡಾ.ಜಾಜಿ ದೇವೇಂದ್ರಪ್ಪ
ಕೊಪ್ಪಳ : ಸಧ್ಯದ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕ ಬದುಕು ಇಕ್ಕಟ್ಟಿನಲ್ಲಿದೆ. ಬರೆಯುವವರದೇ ಒಂದು ವರ್ಗ ಎನ್ನುವಂತಾಗಿದೆ. ಅವರು ಜನರಿಂದ ದೂರ ಸರಿಯುತ್ತಿದ್ದಾರೆ ಎನಿಸುತ್ತಿದೆ. ಕಾವ್ಯಕ್ಕೂ ಬದುಕಿಗೂ ಸಂಬಂಧವಿಲ್ಲದಂತೆ ನಡೆಯುತ್ತಿದೆ. ಬದುಕಿನೆಡೆಗೆ ಬದ್ದತೆ ಮಾಯವಾಗುತ್ತಿದೆ ಎಂದು ಸಂಶೋಧಕ, ವಿಮರ್ಶಕ, ಕವಿ ಡಾ.ಜಾಜಿ ದೇಂವೆಂದ್ರಪ್ಪ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ೪೪ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾವ್ಯ ಸಹಜವಾಗಿ ಬರಬೇಕು. ಕನಿಷ್ಠ ಕಾವ್ಯಗುಣಗಳು ಇರಬೇಕು. ಕವನಗಳಲ್ಲಿ ಹೊಸ ಪರಿಭಾಷೆ ಇರಬೇಕು. ಹಳೆಯದನ್ನು ಮತ್ತು ಹೊಸದನ್ನು ಓದುವ ಗುಣವನ್ನು ಕವಿಗಳು ಬೆಳಿಸಿಕೊಳ್ಳಬೇಕು ಹಾಗಾದಲ್ಲಿ ಕವಿ ಬೆಳೆಯುತ್ತಾನೆ ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಡಾ.ಜಾಜಿ ದೇವೇಂದ್ರಪ್ಪ - ಟಿಕೋಲಾ, ಗಾಯತ್ರಿ ಭಾವಿಕಟ್ಟಿ- ನನ್ನದೊಂದು ದೂರು, ಪುಷ್ಪಲತಾ ಏಳುಬಾವಿ- ಬಾಳಿನ ಚುಕ್ಕಿ, ಡಾ. ರೇಣುಕಾ ಕರಿಗಾರ- ನಿನಗಾಗಿ ನಾನು , ವಿಪರ್‍ಯಾಸ, ಪ್ರೋ: ಅಲ್ಲಮಪ್ರಭು ಬೆಟ್ಟದೂರ- ಸಂಸ್ಕೃತ, ಜಡೆಯಪ್ಪ- ದೂಳು ಗೆದ್ದವರು, ಬರಬೇಡ, ಕರಿಸಿದ್ದನಗೌಡ- ಕಟ್ಟುವೆವು ನಾವು, ಶಿವಪ್ರಸಾದ ಹಾಧಿಮನಿ- ಬಂಡಾಯಕ್ಕೊಬ್ಬನೇ ಚಂಪಾ, ಕಾಮನೂರು ನಾಗೇಂದ್ರಪ್ರಸಾದ- ಶೀರ್ಷಿಕೆ ರಹಿತ ಕವಿತೆ, ಡಾ.ಮಹಾಂತೇಶ ಮಲ್ಲನಗೌಡರ -ಎಲ್ಲರೂ ಸಮಾನರು, ಶರಣಪ್ಪ ಬಾಚಲಾಪೂರ- ನನ್ನ ನಿನ್ನ ನಡುವೆ, ವೀರಣ್ಣ ಹುರಕಡ್ಲಿ- ಇವನೊಬ್ಬ ಸ್ನೇಹಿತ, ಮಹೇಶ ಬಳ್ಳಾರಿ - ಮೂಕನ ಮೊಬೈಲು ಮತ್ತು ಗುಬ್ಬಚ್ಚಿ, ಸಿರಾಜ್ ಬಿಸರಳ್ಳಿ- ನಮ್ಮವರು, ಶಾಂತೇಶ ಬಡಿಗೇರ- ಶೃತಿ, ಸುಮತಿ ಹಿರೇಮಠ- ಚರಿತ್ರೆಗೆ ನಾವು, ಮೆಹಮೂದಮಿಯಾ -ಪ್ರಯತ್ನಗಳು, ವಿಠ್ಠಪ್ಪ ಗೋರಂಟ್ಲಿ-ಶಬ್ದ ಸೂತಕ ಕವನಗಳನ್ನು ವಾಚನ ಮಾಡಿದರು.
ಬೆಳ್ಳಿ ಸಾಕ್ಷಿಗೆ ಜಿಲ್ಲಾ ಸಂಚಾಲಕರಾಗಿ ಆಯ್ಕೆಯಾಗಿರುವ ಮಹೇಶ ಬಳ್ಳಾರಿಯವರನ್ನು ಅಭಿನಂದಿಸಲಾಯಿತು. ಎಸ್.ಎಂ.ಕಂಬಾಳಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, March 7, 2011

ಯಶಸ್ವಿ ಮ್ಯಾರಾಥಾನ್-2011
ಕುಕನೂರಿನಲ್ಲಿ ನಡೆದ ಮ್ಯಾರಾಥಾನ್ ೨೦೧೧ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಸಲ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು ವಿಶೇಷ. ಕುಶ್ ನ ಸಂಘಟಕರು ಅತ್ಯುತ್ತಮವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಮೆಹಬೂಬ ಪಾಷಾ ಅವರ ಸ್ನೇಹಿತರ ಬಳಗ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿ ಮೆಚ್ಚುಗೆಗೆ ಪಾತ್ರವಾಯಿತು. ಕರ್ನಾಟಕದ ನಾನಾಮೂಲೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಜನರ ಮನಸ್ಸನ್ನು ಗೆದ್ದರು.ಹಳದಿ ಮತ್ತು ಬಿಳಿಯ ಟೀ ಶರ್ಟ ಧರಿಸಿದ್ದ ಕುಶ್ ಪಡೆ ಅತ್ಯುತ್ತಮವಾಗಿ ಸಂಘಟಿಸಿತು. ಕಾರ್ಯಕ್ರಮದ ಪ್ರಾಯೋಜಕ ಮೆಹಬೂಬ ಪಾಷಾ ದೂರದ ಊರಲಿದ್ದರೂ ಅವರ ಕೊರತೆಯಾಗದಂತೆ ಅವರ ಟೀಮ್ ಕೆಲಸ ಮಾಡಿತು.

ಕುಕನೂರು ಅಷ್ಟೇ ಏಕೆ ನಮ್ಮ ಸುತ್ತಮುತ್ತ ದುಡ್ಡಿರುವವರು, ಕೋಟ್ಯಾಧೀಶರು ಎನೂ ಕಮ್ಮಿ ಇಲ್ಲ. ಆದರೆ ಒಳ್ಳೆಯ ಮನಸ್ಥಿತಿ ಉಳ್ಳವರು , ಸಮಾಜಕ್ಕಾಗಿ ಮಿಡಿಯುವವರು ಬಹಳ ವಿರಳ. ಅವರಲ್ಲಿ ಒಬ್ಬರು ಮೆಹಬೂಬ್ ಪಾಷಾ. ಅವರ ಕುಟುಂಬದ ಸದಸ್ಯರೂ ಸಹ ಅಷ್ಟೇ ಸರಳವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅತಿಥಿಗಳಾಗಿದ್ದ ಪ್ರೊ.ಅಲ್ಲಮಪ್ರಭು ಬೆಟ್ಟದೂರ ಹಾಗೂ ಇತರರು ಕುಶ್ ಸಂಸ್ಥೆಯ ಕೆಲಸವನ್ನು ಶ್ಲಾಘಿಸಿದರು.

ಕುಶ್ ಟೀಮ್ ಗೆ ಶುಭಾಷಯಗಳು.

Saturday, March 5, 2011

44ನೇ ಕವಿಸಮಯ :ವಾರದ ಅತಿಥಿಯಾಗಿ ಯುವ ಸಾಹಿತಿ, ವಿಮರ್ಶಕ ಡಾ.ಜಾಜಿ ದೇವೆಂದ್ರಪ್ಪ

ಈ ವಾರ ನಗರದ ಎನ್ ಜಿ ಓ ಭವನದಲ್ಲಿ 44ನೇ ಕವಿಸಮಯ ನಡೆಯಲಿದೆ.
ವಾರದ ಅತಿಥಿಯಾಗಿ ಯುವ ಸಾಹಿತಿ, ವಿಮರ್ಶಕ ಡಾ.ಜಾಜಿ ದೇವೆಂದ್ರಪ್ಪ ಆಗಮಿಸಲಿದ್ದಾರೆ.
ಆಸಕ್ತರು ಭಾಗವಹಿಸಲು ಕೋರಲಾಗಿದೆ.

ಸಿರಾಜ್
ಬಿಸರಳ್ಳಿ

ಮಾಹಿತಿ ಆಂದೋಲನ ಮಹತ್ವದ ಮೈಲಿಗಲ್ಲು- ಶಿವರಾಮಗೌಡ

ಕೊಪ್ಪಳ, ಮಾ. ೫: ಯಾವುದೇ ಯೋಜನೆಯ ಯಶಸ್ಸು, ಅನುಷ್ಠಾನಾಧಾರಿತವಾಗಿದ್ದು, ಸಾರ್ವಜನಿಕ ಮಾಹಿತಿ ಆಂದೋಲನ ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಕೊಪ್ಪಳ ಸಂಸದ ಶಿವರಾಮಗೌಡ ಅಭಿಪ್ರಾಯಪಟ್ಟಿದ್ದಾರೆ.
ಗಂಗಾವತಿಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ, ಪಿ.ಐ.ಬಿ. ಹ"ಕೊಂಡಿರುವ ಮೂರು ದಿನಗಳ ಭಾರತ ನಿರ್ಮಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಹಿತಿಯ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳದೆ ಹಲವು ಸರ್ಕಾರಗಳೇ ಉರುಳಿ ಹೋಗಿವೆ. ಮಾಹಿತಿ ಅತ್ಯಂತ ಮಹತ್ವದ ಹಾಗೂ ಪರಿಣಾಮಕಾರಿ ಅಸ್ತ್ರವಾಗಿದೆ. ಕೇಂದ್ರ ಯುಪಿಎ ಸರ್ಕಾರ ೨೦೧೧-೧೨ನೇ ಸಾಲಿನಲ್ಲಿ ಭಾರತ ನಿರ್ಮಾಣಕ್ಕಾಗಿ ೧೦ಸಾವಿರ ಕೋಟಿ ರೂಪಾ ಯೋಜನೆ ಪ್ರಕಟಿಸಿದೆ. ಸಮಾಜದ ಎಲ್ಲರಿಗೂ ಆರೋಗ್ಯ, ಆಹಾರ, ಆಸರೆ, ಅಕ್ಷರಜ್ಞಾನ ಹಾಗೂ ಅರಿವು ಮೂಡಿಸುವುದು ಯೋಜನೆಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಒಗ್ಗೂಡಿ ದುಡಿಯುತ್ತಿವೆ ಎಂದು ಸಂಸದ ಶಿವರಾಮಗೌಡ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವ"ಸಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ಉದ್ದೇಶವೂ ಯೋಜನೆಗಳ ಸಮರ್ಥ ಅನುಷ್ಠಾನವೇ ಆಗಿದೆ. ಈ ನಿಟ್ಟಿನಲ್ಲಿ ಯಾವುದೇ ಯೋಜನೆಯ ಯಶಸ್ಸಿನ ಫಲ ಎರಡೂ ಸರ್ಕಾರಗಳಿಗೆ ಸಮಾನವಾಗಿ ಸಲ್ಲುತ್ತದೆ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆ ರೂಪಿಸಿದ್ದು ಅದಕ್ಕೆ ಹಣವನ್ನೂ ನೀಡುತ್ತಿದೆ, ಆದರೆ, ಇದನ್ನು ಅನುಷ್ಠಾನ ಮಾಡುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ರಾಜ್ಯ ಸರ್ಕಾರ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿದೆ. "ಗಾಗಿಯೇ ಕಾರ್ಯಕ್ರಮ ಅನುಷ್ಠಾನದಲ್ಲಿ ರಾಜ್ಯ ದೇಶದಲ್ಲೇ ೨ನೇ ಸ್ಥಾನ ಪಡೆದಿದೆ. ಹನುಮ ಹುಟ್ಟಿದ ನಾಡು ಗಂಗಾವತಿ, ಪ"ತ್ರ ಪುಣ್ಯತಾಣವೂ ಆಗಿದ್ದು, ಈ ತಾಲೂಕಿನಲ್ಲಿ ಹಲವು ಮಹತ್ವದ, ಐತಿಹಾಸಿಕ ಹಾಗೂ ಪುರಾಣ ಪುಣ್ಯ ತಾಣಗಳಿದ್ದು, ಪ್ರವಾಸೋದ್ಯಮಕ್ಕೆ "ಫುಲ ಅವಕಾಶ"ದೆ. ಈ ನಿಟ್ಟನಲ್ಲಿ ತಾಲೂಕಿನ ಪ್ರವಾಸಿ ತಾಣಗಳ ಬಗ್ಗೆಯೂ ಹೆಚ್ಚಿನ ಪ್ರಚಾರ ಮಾಡುವುದು ಅಗತ್ಯ ಎಂದು ಪ್ರತಿಪಾದಿಸಿದ ಅವರು, ಕೇಂದ್ರ ಸರ್ಕಾರದ ವಾರ್ತಾ ಶಾಖೆ ಗಂಗಾವತಿಯನ್ನು ಆಯ್ಕೆ ಮಾಡಿಕೊಂಡು ಇಲ್ಲಿ, ೩ ದಿನಗಳ ಕಾಲ ಮಾ"ತಿ ಆಂದೋಲನ ಹ"ಕೊಂಡಿದೆ. ಊರಿನ ಸಮಸ್ತರು ಈ ಕಾರ್ಯಕ್ರಮಕ್ಕೆ ಆಗ"ಸಿ, ಮಳಿಗೆಗಳಲ್ಲಿ ವಿವಿಧ ಇಲಾಖೆಗಳು ಪ್ರಕಟಿಸಿರುವ ಯೋಜನೆಗಳ ಬಗ್ಗೆ ಮಾ"ತಿ ಪಡೆದು, ಅದರ ಅನುಕೂಲತೆಯನ್ನು ಪಡೆಯಬೇಕೆಂದು ಮನವಿ ಮಾಡಿದರು.
ಭಾರತ ಸರ್ಕಾರದ ವಾರ್ತಾ ಶಾಖೆಯ ಉಪ ನಿರ್ದೇಶಕರಾದ ಪಲ್ಲವಿ ಚಿಣ್ಯ, ಕೊಪ್ಪಳ ಜಿಲ್ಲಾ ಪಂಚಾಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಮೂರ್ತಿ, ಜಿಲ್ಲಾ ಪಂಚಾ ಸದಸ್ಯರಾದ ವಿಜಯಲಕ್ಷ್ಮೀ ರಾಮಕೃಷ್ಣ ಹಾಗೂ ಪಿ. ಕೊಂಡಯ್ಯ, ತಾಲೂಕು ಪಂಚಾ ಅಧ್ಯಕ್ಷರಾದ ಹೊನ್ನೂರಸಾಬ್, ಉಪಾಧ್ಯಕ್ಷೆ ಹಿರೆ ಹನುಮವ್ವ, ಗಂಗಾವತಿ ನಗರಸಭೆ ಅಧ್ಯಕ್ಷರಾದ ಗುಡ್ಡೇಕಲ್ ಬಸಪ್ಪನಾಯಕ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.Friday, March 4, 2011

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿಸಾಕ್ಷಿಗೆ ಮಹೇಶ ಬಳ್ಳಾರಿ ಜಿಲ್ಲಾ ಸಂಚಾಲಕ


ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿಸಾಕ್ಷಿಗೆ ಮಹೇಶ ಬಳ್ಳಾರಿ ಜಿಲ್ಲಾ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಗೆ ಕೊಪ್ಪಳ ಕವಿಸಮೂಹ ಅಭಿನಂದನೆ ಸಲ್ಲಿಸಿದೆ.